ಕಾಮನ್ ವೆಲ್ತ್ ನಲ್ಲಿ ಚಿನ್ನದ ನಗೆ ಬೀರಿದ ಚಾನು

Update: 2018-04-05 07:19 GMT

ಗೋಲ್ಡ್ ಕೊಸ್ಟ್ , ಎ.5:  ಭಾರತದ  ಮಹಿಳಾ ವೇಟ್ ಲಿಫ್ಟರ್   ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ  ಚಿನ್ನ ಜಯಿಸಿದ್ದಾರೆ.

ಚಾನು ಅವರು ಗುರುವಾರ 48 ಕೆ.ಜಿ ವಿಭಾಗದಲ್ಲಿ ಒಟ್ಟು 196 ಕೆ.ಜಿ ಭಾರ ಎತ್ತಿ ಚಿನ್ನ ಗೆದ್ದುಕೊಂಡರು.

23ರ ಹರೆಯದ ಚಾನು ಅವರು ಸ್ನಾಚ್ ನಲ್ಲಿ 86 ಕೆ.ಜಿ ಮತ್ತು ಜರ್ಕ್ ನಲ್ಲಿ 110 ಕೆ.ಜಿ ಭಾರ ಎತ್ತಿ ಹೊಸ ದಾಖಲೆಯೊಂದಿಗೆ ಚಿನ್ನ ಪಡೆದಿದ್ದಾರೆ

ಇದರೊಂದಿಗೆ ಚಾನು ಭಾರತದ ಖಾತೆಗೆ ಮೊದಲ ಚಿನ್ನ ಜಮೆ ಮಾಡಿದ್ದಾರೆ.

ಭಾರತದ ಖಾತೆಗೆ  ಎರಡು ಪದಕಗಳು ವೇಟ್ ಲಿಫ್ಟಿಂಗ್  ಮೂಲಕ ಜಮೆಯಾಗಿದೆ.

ವೇಟ್ ಲಿಫ್ಟಿಂಗ್ ನಲ್ಲಿ ಗುರುರಾಜ್ ಅವರು ಪುರುಷರ 56 ಕೆ.ಜಿ.ವಿಭಾಗದಲ್ಲಿ ಒಟ್ಟು 249 ಕೆ.ಜಿ.ಭಾರ ಎತ್ತಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News