ರಾಮನವಮಿ ಗಲಭೆ: ಹಾನಿಗೀಡಾದ ಮಸೀದಿಗಳ ದುರಸ್ತಿಗೆ ನಿತೀಶ್ ಸರಕಾರದಿಂದ 2 ಲಕ್ಷ ರೂ. ಬಿಡುಗಡೆ

Update: 2018-04-06 09:11 GMT

ಪಾಟ್ನಾ, ಎ.6: ಗಲಭೆಪೀಡಿತ ಗುದ್ರಿಯಲ್ಲಿರುವ ಮಸೀದಿ ಹಾಗು ಸಮಸ್ತಿಪುರದಲ್ಲಿರುವ ಝೈನುಲ್ ಉಲುಂ ಮದ್ರಸದ ದುರಸ್ತಿಗಾಗಿ ಬಿಹಾರ ಸರಕಾರ 2 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ.

ನಿತೀಶ್ ಕುಮಾರ್ ನೇತೃತ್ವದ ಗೃಹ ಇಲಾಖೆಯು ಮಸೀದಿಗಳ ದುರಸ್ತಿಗಾಗಿ 2,13,700 ರೂ.ಗಳನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ. ಔರಂಗಾಬಾದ್ ನಲ್ಲಿ ರಾಮನವಮಿ ಸಂದರ್ಭ ನಡೆದ ಗಲಭೆಯಲ್ಲಿ ಹಾನಿಗೀಡಾದ ಅಂಗಡಿಗಳಿಗೆ 25 ಲಕ್ಷ ರೂ. ಪರಿಹಾರವನ್ನೂ ಸರಕಾರ ಬಿಡುಗಡೆಗೊಳಿಸಿದೆ. 6 ಮಂದಿ ಸಂತ್ರಸ್ತರಿಗಾಗಿ 8.5 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.

ಭಾಗಲ್ಪುರ್ ಹಾಗು ಔರಂಗಾಬಾದ್ ನಲ್ಲಿ ರಾಮನವಮಿ ಸಂದರ್ಭ ಕೋಮು ಗಲಭೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News