ಪ್ರತಿದಿನ ಉಣ್ಣುವ ನಮ್ಮ ಊಟವೂ ಅಪಾಯಕಾರಿ!

Update: 2018-04-06 10:35 GMT

ಹೊಸದಿಲ್ಲಿ,ಎ.6 : ಪ್ರತಿ ದಿನ ನಿಮ್ಮ ಊಟದೊಂದಿಗೆ ನೀವು 100 ಅತೀ ಸಣ್ಣ ಪ್ಲಾಸ್ಟಿಕ್ ಕಣಗಳನ್ನೂ ಸೇವಿಸುತ್ತಿರಬಹುದೆಂದು  ಅಧ್ಯಯನವೊಂದರಿಂದ ತಿಳಿದು ಬಂದಿದೆ. ಮನೆಯ ಪೀಠೋಪಕರಣಗಳನ್ನು ಅಲಂಕರಿಸುವ ಬಟ್ಟೆಗಳು ಹಾಗೂ ಸಿಂಥೆಟಿಕ್  ಬಟ್ಟೆಗಳಲ್ಲಿರುವ ಪಾಲಿಮರ್ ಕಣಗಳು ಮನೆಯಲ್ಲಿರುವ ಧೂಳಿನ ಕಣಗಳೊಂದಿಗೆ ಸೇರಿಕೊಂಡು ನಮ್ಮ ಊಟದ ತಟ್ಟೆಯಲ್ಲಿ ನೆಲೆಯೂರುತ್ತವೆ ಎಂದು ಇಂಗ್ಲೆಂಡಿನ ಹೆರಿಯೊಟ್-ವಾಟ್ ವಿವಿಯ ಸಂಶೋಧಕರು ನಡೆಸಿದ ಸಂಶೋಧನೆಯೊಂದರಿಂದ ತಿಳಿದು ಬಂದಿದೆ.

ಮೂರು ಮನೆಗಳಲ್ಲಿ ಊಟದ ಸಮಯದಲ್ಲಿ  ಮೇಜಿನಲ್ಲಿನ ಊಟದ ತಟ್ಟೆಗಳ  ಹತ್ತಿರ ಅಂಟಿಕೊಳ್ಳುವ ಧೂಳಿನ ಕಣಗಳನ್ನು ಹೊಂದಿರುವ ಪೆಟ್ರಿ ಡಿಶ್ ಅನ್ನು ಇರಿಸುವ ಮೂಲಕ ಸಂಶೋಧಕರು ಮೇಲಿನ ಅಂಶವನ್ನು ಕಂಡುಕೊಂಡಿದ್ದಾರೆ.

20 ನಿಮಿಷಗಳ ಕಾಲ ಊಟ ಮಾಡಿದ  ನಂತರ  ಈ ಪೆಟ್ರಿ ಡಿಶ್ ಗಳಲ್ಲಿ 14 ಪ್ಲಾಸ್ಟಿಕ್ ಚೂರುಗಳು ಪತ್ತೆಯಾಗಿದ್ದು  ಸಾಮಾನ್ಯ ಊಟದ ತಟ್ಟೆಯಲ್ಲಿ 114 ಪ್ಲಾಸ್ಟಿಕ್ ಫೈಬರ್ ಗಳಿಗೆ ಇದು ಸಮವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ  ಊಟಕ್ಕೆ ಕುಳಿತಾಗ  ಅಪಾಯಕಾರಿಯಾಗಬಹುದಾದ 68,415 ಪ್ಲಾಸ್ಟಿಕ್ ಫೈಬರ್ ಗಳು ಆತನ ಹೊಟ್ಟೆ ಸೇರಬಹುದು.

ಸಾಗರೋತ್ಪನ್ನಗಳಲ್ಲಿ, ಮುಖ್ಯವಾಗಿ ಚಿಪ್ಪು ಮೀನುಗಳಲ್ಲಿ ಕೂಡ ಪ್ಲಾಸ್ಟಿಕ್ ಕಣಗಳು ಹೆಚ್ಚಿವೆ. ಮನೆಯಲ್ಲಿನ ಧೂಳಿನ ಕಣಗಳಲ್ಲಿರುವ ಪ್ಲಾಸ್ಟಿಕ್ ಫೈಬರ್ ಗಳಿಂದಾಗಿ ವರ್ಷಕ್ಕೆ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 13,731ರಿಂದ 68,415 ಪ್ಲಾಸ್ಟಿಕ್ ಫೈಬರ್ ಗಳು ಸೇರಬಹುದು ಎಂದು ಸಂಶೋಧಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News