ರಕ್ಷಣಾ ಸಚಿವಾಲಯದ ವೆಬ್ ಸೈಟ್ ಮೇಲೆ ಚೀನಿ ದಾಳಿ!

Update: 2018-04-06 13:23 GMT

ಹೊಸದಿಲ್ಲಿ, ಎ.6: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆಗಿದ್ದು, ಚೀನೀ ಅಕ್ಷರಗಳು ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಇಂತವುಗಳನ್ನು ತಡೆಯಲಾಗುವುದು” ಎಂದಿದ್ದಾರೆ.

ವೆಬ್ ಸೈಟ್ ಗೆ ಭೇಟಿ ನೀಡಿದರೆ ‘ಎರರ್’ ಎಂದು ತೋರಿಸುವ ವೆಬ್ ಸೈಟ್ ‘ಮತ್ತೊಮ್ಮೆ ಪ್ರಯತ್ನಿಸಿ’ ಎಂದು ಸೂಚಿಸುತ್ತದೆ. ಇಷ್ರಟೇ ಅಲ್ಲದೆ ಆರಂಭದಲ್ಲಿ ಚೀನಿ ಅಕ್ಷರಗಳು ಕಾಣಿಸಿಕೊಂಡಿದ್ದು, ಇದು ಇಂಗ್ಲಿಷ್ ನ ‘ಹೋಂ’ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಚೀನಿ ಹ್ಯಾಕರ್ ಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಕಾನೂನು, ಗೃಹ ವ್ಯವಹಾರಗಳ ಹಾಗು ಕಾರ್ಮಿಕ ಸಚಿವಾಲಯದ ವೆಬ್ ಸೈಟ್ ಗಳೂ ಕೂಡ ಇದರೊಂದಿಗೆ ಡೌನ್ ಆಗಿತ್ತು ಎನ್ನಲಾಗಿದೆ. ಆದರೆ ತನ್ನ ವೆಬ್ ಸೈಟ್ ಹ್ಯಾಕ್ ಆಗಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News