15 ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-04-06 14:11 GMT

ಬೆಂಗಳೂರು, ಎ.6: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶದನ್ವಯ, ಚುನಾವಣಾ ಪಕ್ರಿಯೆಯು ಸುಗಮವಾಗಿ ನಡೆಯುವ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ 15 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ- ಟಿ.ರಾಘವೇಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ(3)-ಟಿ.ರೇಖಾ, ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ-ಕುಸುಮಾ ಕುಮಾರಿ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ ವಿಭಾಗದ ಉಪ ವಿಭಾಗಾಧಿಕಾರಿ- ಎಂ.ಪಿ.ಮಾರುತಿ, ಗುಲ್ಬರ್ಗ ಜಿಲ್ಲೆಯ ಉಪ ವಿಭಾಗದ ಅಪರ ಆಯುಕ್ತರ ಕಚೇರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ(ಆಡಳಿತ)-ರಮೇಶ್ ದೇಸಾಯಿ, ಮಂಡ್ಯ ಜಿಲ್ಲೆಯ ಉಪ ವಿಭಾಗದ ಉಪ ವಿಭಾಗಾಧಿಕಾರಿ- ಎನ್.ಎಸ್.ಚಿದಾನಂದ.

ಬೆಂಗಳೂರು ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿ(1)- ಬಿ.ಸಿ.ಶಿವಾನಂದಮೂರ್ತಿ, ರಾಜ್ಯ ಗೃಹ ಮಂಡಳಿಯ ಉಪ ಪ್ರಧಾನ ವ್ಯವಸ್ಥಾಪಕ(ಗ್ರಾಹಕರ ಸೇವೆ)-ಎಚ್.ಜಿ.ಚಂದ್ರಶೇಖರಯ್ಯ, ಬೆಂಗಳೂರಿನ ಕೆ-ಬೀಟ್ಸ್ ಪ್ರಧಾನ ವ್ಯವಸ್ಥಾಪಕಿ-ಎಂ.ಕೆ.ಸವಿತಾ, ಕೊಟ್ಟೂರು-ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ-ಸಾಜಿದ್ ಅಹಮದ್ ಮುಲ್ಲಾ.

ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರು(ವಲಯ-3)- ಎಂ.ಎನ್.ಮಂಜುನಾಥ್, ಬೆಂಗಳೂರು ಜಲಮಂಡಳಿ ಒಳಚರಂಡಿ ಮಂಡಳಿಯ ಆಡಳಿತಾಧಿಕಾರಿ-ಅರುಳ್ ಕುಮಾರ್, ಮೈಸೂರು ಕಬಿನಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ-ರೇಷ್ಮ ಹಾನಗಲ್.

ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ(2)-ಜಿ.ಲಿಂಗಮೂರ್ತಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ-ಎಚ್.ಎನ್.ಶಿವೇಗೌಡರನ್ನು ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News