ಭಾರತದ ಈ ನಗರದಲ್ಲಿ ಜನಸಂಖ್ಯೆಗಿಂತಲೂ ಹೆಚ್ಚಿದೆ ವಾಹನಗಳ ಸಂಖ್ಯೆ!

Update: 2018-04-06 16:38 GMT

ಪುಣೆ, ಎ.6: ಸಾಮಾನ್ಯವಾಗಿ ನಗರ ಎಂದ ಮೇಲೆ ವಾಹನಗಳ ಸಂಖ್ಯೆ ಹೆಚ್ಚೇ ಇರುತ್ತದೆ. ಆದರೆ ಜನರಿಗಿಂತಲೂ ಹೆಚ್ಚು ವಾಹನಗಳಿವೆ ಎಂದರೆ ನೀವು ನಂಬಲೇಬೇಕು. ಹೌದು ಪುಣೆ ನಗರದಲ್ಲಿರುವ ಒಟ್ಟು ವಾಹನಗಳ ಸಂಖ್ಯೆ ಜನಸಂಖ್ಯೆಯನ್ನು ಮೀರಿದ್ದು, ಇಂಥ ಖ್ಯಾತಿ ಪಡೆದ ಭಾರತದ ಮೊಟ್ಟಮೊದಲ ನಗರ ಎನಿಸಿದೆ.

ನಗರದ ಜನಸಂಖ್ಯೆ ಸುಮಾರು 35 ಲಕ್ಷ ಆಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿ (ಎಂಎಚ್-12) ಯಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 36.2 ಲಕ್ಷ ಆಗಿದೆ ಎಂದು ಆರ್ ಟಿಒ ಮುಖ್ಯಸ್ಥ ಬಾಬಾಸಹೇನ್ ಅಜ್ರಿ ಹೇಳಿದ್ದಾರೆ.

2018ರ ಮಾರ್ಚ್ 31ರವರೆಗೆ, ಆರ್ ಟಿಒದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 2.80 ಲಕ್ಷ ದಾಟಿದೆ. ದ್ವಿಚಕ್ರವಾಹನಗಳ ಸಂಖ್ಯೆ ಅತ್ಯಧಿಕ. ಹಿಂದೆ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸೇರಿದಂತೆ ಒಟ್ಟು ವಾಹನಗಳ ಸಂಖ್ಯೆ 36.27 ಲಕ್ಷ ಆಗಿದೆ. ಹಿಂದಿನ ವರ್ಷದ ಅಂತ್ಯದವರೆಗೆ ದಾಖಲಾದ ವಾಹನಗಳ ಸಂಖ್ಯೆ 33.37 ಲಕ್ಷ ಆಗಿತ್ತು ಎಂದು ಆರ್ಜಿ ವಿವರಿಸಿದ್ದಾರೆ.

2017ಕ್ಕೆ ಹೋಲಿಸಿದರೆ, ನೋಂದಣಿಯಾದ ನಾಲ್ಕು ಚಕ್ರದ ವಾಹನಗಳ ಸಂಖ್ಯೆ 5.89 ಲಕ್ಷದಿಂದ 6.45 ಲಕ್ಷಕ್ಕೆ ಹೆಚ್ಚಿದೆ. ದ್ವಿಚಕ್ರವಾಹನಗಳ ಸಂಖ್ಯೆ 24.97 ಲಕ್ಷದಿಂದ 27.03 ಲಕ್ಷಕ್ಕೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News