ಮಲೇಶ್ಯ ಸಂಸತ್ತು ವಿಸರ್ಜಿಸಿದ ಪ್ರಧಾನಿ ನಜೀಬ್

Update: 2018-04-06 18:17 GMT

ಕೌಲಾಲಂಪುರ, ಎ. 6: ಐದು ವರ್ಷದ ಅವಧಿ ಮುಗಿಯಲು ಎರಡು ತಿಂಗಳಿಗೂ ಹೆಚ್ಚು ಸಮಯ ಇರುವಂತೆಯೇ, ಮಲೇಶ್ಯ ಪ್ರಧಾನಿ ನಜೀಬ್ ರಝಾಕ್ ಶುಕ್ರವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಇನ್ನು ಅಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ.

64 ವರ್ಷದ ನಜೀಬ್ ಸರಕಾರ ಬೃಹತ್ ಹಣಕಾಸು ಹಗರಣವೊಂದರ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಏರುತ್ತಿರುವ ಜೀವನವೆಚ್ಚದಿಂದಾಗಿ ಅಸಮಾಧಾನಗೊಂಡಿರುವ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ.

‘‘ಶನಿವಾರದಿಂದ ಜಾರಿಗೆ ಬರುವಂತೆ ಸಂಸತ್ತನ್ನು ವಿಸರ್ಜಿಸಲು ಮಲೇಶ್ಯ ದೊರೆ 5ನೆ ಸುಲ್ತಾನ್ ಮುಹಮ್ಮದ್ ಅಂಗೀಕಾರ ನೀಡಿದ್ದಾರೆ’’ ಎಂದು ನಜೀಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News