‘ಶೋಲೆ’ ಚಿತ್ರದ ನಟ ರಾಜ್ ಕಿಶೋರ್ ನಿಧನ

Update: 2018-04-07 05:09 GMT

 ಹೊಸದಿಲ್ಲಿ, ಎ.6: ಬಾಲಿವುಡ್‌ನ ಜನಪ್ರಿಯ ‘ಶೋಲೆ’ ಚಿತ್ರದ ನಟ ರಾಜ್ ಕಿಶೋರ್(85 ವರ್ಷ) ಗುರುವಾರ ರಾತ್ರಿ ಗುರುಗಾಂವ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಿರಿಯ ನಟ ಕಿಶೋರ್ ಅವರು ಶೋಲೆ, ದೀವಾರ್, ಹರೇ ರಾಮ, ಹರೇ ಕೃಷ್ಣ ಹಾಗೂ ಪಡೋಸನ್ ಸಹಿತ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಸೂಪರ್ ಹಿಟ್ ಚಿತ್ರ ಶೋಲೆಯಲ್ಲಿ ಕಿಶೋರ್ ಓರ್ವ ಕೈದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

 ಸಿನಿಮಾ ಹಾಗೂ ಟಿವಿ ಕಲಾವಿದರ ಸಂಘದ ಸದಸ್ಯೆ, ನಟಿ ನೂಪುರ್ ಅಲಂಕಾರ್ ಅವರು ಕಿಶೋರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು,‘‘ರಾಜ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಹೊಟ್ಟೆಯಲ್ಲಿ ಸಮಸ್ಯೆ ಇತ್ತು. ಆದರೆ, ಅವರು ಹಾಸಿಗೆ ಹಿಡಿದಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಅವರಿಗೆ ಲಘು ಹೃದಯಾಘಾತವಾಗಿತ್ತು. ಗುರುವಾರ ರಾತ್ರಿ ಗುರುಗಾಂವ್‌ನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದರು.

ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News