ಲೈಂಗಿಕ ಕಿರುಕುಳದಿಂದ ತಪ್ಪಿಸಲು 4ನೇ ಮಹಡಿಯಿಂದ ಹಾರಿದ ಬಾಲಕಿ

Update: 2018-04-08 15:07 GMT

ಮುಂಬೈ, ಎ. 6: ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು 12 ವರ್ಷದ ಬಾಲಕಿ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ ಘಟನೆ ಮುಂಬೈಯಲ್ಲಿ ನಡೆದಿದೆ. ಆಟೋ ಚಾಲಕರು ರಿಕ್ಷಾ ನಿಲ್ಲಿಸಲು ಬಟ್ಟೆಯಿಂದ ನಿರ್ಮಿಸಿದ ತಾತ್ಕಾಲಿಕ ಸುರಕ್ಷಾ ನೆಟ್ ಮೇಲೆ ಬಾಲಕಿ ಬಿದ್ದ ಪರಿಣಾಮ ಬಾಲಕಿಯ ಜೀವ ಹಾನಿಯಾಗಿಲ್ಲ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

ನಿರ್ಮಾಣ ಹಂತದಲ್ಲಿರುವ ಸಮೀಪದ ಕಟ್ಟಡದ ದಾರಿಯನ್ನು ಬಾಲಕಿಯಲ್ಲಿ ಆರೋಪಿ ವ್ಯಕ್ತಿ ಕೇಳುತ್ತಿರುವುದನ್ನು ರಿಕ್ಷಾ ನೌಕರರು ಗುರುತಿಸಿದ್ದಾರೆ. ಆರೋಪಿ ಬಾಲಕಿಯನ್ನು ದಾರಿ ತೋರಿಸಲು ತನ್ನೊಂದಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂದರ್ಭ ಬಾಲಕಿ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News