ಅಮೆರಿಕ: ಹಿಜಾಬ್ ಧರಿಸಿದ ಮಹಿಳೆಗೆ ಇರಿತ

Update: 2018-04-08 17:10 GMT

ಹ್ಯೂಸ್ಟನ್,ಎ.10: ಅಮೆರಿಕದಲ್ಲಿ ಕೋಮುದ್ವೇಷದ ದಾಳಿಗಳ ಸರಣಿ ಮುಂದುವರಿದಿದ್ದು, 31 ವರ್ಷದ ಹಿಜಾಬ್‌ಧಾರಿ ನರ್ಸ್ ಒಬ್ಬಾಕೆಯನ್ನು ಅಪರಿಚಿತನೊಬ್ಬ ಹಾಡಹಗಲೇ ಇರಿದು ಗಾಯಗೊಳಿಸಿದ ಘಟನೆ ಹ್ಯೂಸ್ಟನ್ ನಗರದ ವಾಯುವ್ಯ ಹ್ಯಾರಿಸ್ ಕೌಂಟಿಯಲ್ಲಿ ನಡೆದಿದೆ.

ಯುವತಿಯ ಮೇಲೆ ದಾಳಿ ನಡೆಸಿದ ವ್ಯಕ್ತಿಯ ಬಗ್ಗೆ ಸುಳಿವು ನೀಡಿದವರಿಗೆ 5 ಸ್ಥಳೀಯ ಪೊಲೀಸರು 5 ಸಾವಿರ ಡಾಲರ್‌ಗಳ ಬಹುಮಾನವನ್ನು ಘೋಷಿಸಿದ್ದಾರೆ.

 ಬಿಳಿಯ ಜನಾಂಗೀಯಳಾದ ಈ ಮುಸ್ಲಿಂ ಮಹಿಳೆ, ಗುರುವಾರ ಬೆಳಗ್ಗೆ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದು, ತನ್ನ ಕೆಲಸದ ಪಾಳಿಯನ್ನು ಮುಗಿಸಿ, ಮನೆಗೆ ಕಾರಿನಲ್ಲಿ ವಾಪಸಾಗುತ್ತಿದ್ದರು, ಕೆಂಪು ಬಣ್ಣದ ಕಾರೊಂದು ಆಕೆಯ ವಾಹನವನ್ನು ಸವರಿಕೊಂಡು ಹೋಯಿತು. ತನ್ನ ಕಾರಿಗಾದ ಹಾನಿಯನ್ನು ಪರಿಶೀಲಿಸಲು ಆಕೆ ವಾಹನದಿಂದ ಕೆಳಗಿಳಿದಾಗ, ಕೆಂಪುಬಣ್ಣದ ಕಾರು ಯುಟರ್ನ್ ಹೊಡೆದು ಪಕ್ಕದಲ್ಲೇ ಬಂದು ನಿಂತಿತ್ತು.

  ಆ ಕಾರಿನಿಂದ ಯುವಕನೊಬ್ಬ ಇಳಿದು ಮಹಿಳೆಯನ್ನು ಧಾರ್ಮಿಕ ದ್ವೇಷದ ಪದಗಳಿಂದ ನಿಂದಿಸಿದನಲ್ಲದೆ, ಚೂರಿಯ ಹಿಡಿಯಿಂದ ಆಕೆಯ ಭುಜ ಹಾಗೂ ಕೈಗೆ ಬಲವಾಗಿ ಹೊಡೆದ. ಆನಂತರ ಆಕೆಯ ತೋಳಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆಂದು ಘಟನೆಯ ಬಗ್ಗೆ ವಿವರಗಳನ್ನು ನೀಡಿರುವ ಕೌನ್ಸಿಲ್ ಆಫ್ ಅಮೆರಿಕ-ಇಸ್ಲಾಮಿಕ್ ರಿಲೇಶನ್ಸ್ ಸಂಸ್ಥೆಯ ಹ್ಯೂಸ್ಟನ್ ಘಟಕ ತಿಳಿಸಿದೆ.

ಆಗ ಕಾರಿನಲ್ಲಿದ್ದ ಇನ್ನೊಬ್ಬ ಯುವಕ ಕೆಳಗಿಳಿದು ದಾಳಿಕೋರನನ್ನು ಕಾರಿನಲ್ಲಿ ಹತ್ತಿಸಿ, ಸ್ಥಳದಿಂದ ನಿರ್ಗಮಿಸಿದನೆಂದು ಅದು ಹೇಳಿದೆ. ಕೈಗೆ ಇರಿತದ ಗಾಯಗಳಾಗಿರುವ ಮಹಿಳೆಯು ತಾನು ಉದ್ಯೋಗದಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇಬ್ಬರು ಯುವಕರೂ 20ರಿಂದ 25 ವರ್ಷಗಳಾಗಿದ್ದು, ಅವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News