ಅಂತರ್ರಾಷ್ಟ್ರೀಯ ಮೊಕದ್ದಮೆಗಳಲ್ಲಿ ಭಾರತದ ದುರ್ಬಲ ಹೋರಾಟ

Update: 2018-04-08 18:23 GMT

ಅಂತರ್‌ರಾಷ್ಟ್ರೀಯ ಸಂಧಾನ ಮಾತುಕತೆಗಳಲ್ಲಿ ಭಾರತದ ಹಿತಾಸಕ್ತಿಗಳನ್ನು ಸಮರ್ಪಕವಾಗಿ ಪ್ರತಿನಿ ಸಲಾಗುತ್ತಿಲ್ಲವೆಂದು ಹಲವಾರು ಪ್ರಚಲಿತ ವಿಷಯಗಳ ಬಗ್ಗೆ ಪ್ರಧಾನಿಯವರಿಗೆ ಸಲಹೆ ನೀಡುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೀಗ ಅರಿವಾಗಿದೆ.ಅಂತರ್‌ರಾಷ್ಟ್ರೀಯ ಕಾನೂನು ಹೋರಾಟಗಳಲ್ಲಿ ಗಣಿಗಾರಿಕೆ ಹಾಗೂ ಭಾರೀ ಕೈಗಾರಿಕೆಯ ಸಚಿವಾಲಯಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಹಾಗೂ ಸರಕಾರದಿಂದ ನಿಯೋಜಿತರಾದ ಕಾನೂನು ಅಕಾರಿಗಳು ನ್ಯಾಯಾಲಯದ ಮಧ್ಯಸ್ಥಿಕೆಗಳಲ್ಲಿ ಪರಿಣಾಮ ಬೀರಲು ಸಾಧ್ಯವಾಗುವಂತಹ ಸಮರ್ಪಕ ನಿಲುವನ್ನು ಹೊಂದಿಲ್ಲವೆಂದು ಜೇಟ್ಲಿ ಪತ್ರವೊಂದರಲ್ಲಿ ಅಭಿಪ್ರಾಯಿಸಿದ್ದಾರೆ.
ವಿವಾದಾತ್ಮಕವಾದ 22,100 ಕೋಟಿ ರೂ. ವೌಲ್ಯದ ವೊಡಾೆನ್ ಪ್ರಕರಣವೂ ಸೇರಿದಂತೆ, ಹಲವಾರು ವಾಣಿಜ್ಯ ಒಪ್ಪಂದಗಳಿಗೆ ಸಂಬಂಸಿದ ಕಾನೂನು ಹೋರಾಟಗಳಲ್ಲಿ ಬೊಕ್ಕಸಕ್ಕೆ ಸಹಸ್ರಾರು ರೂ.ಗಳಷ್ಟು ವರಮಾನವನ್ನು ತರುವಂತಹದ್ದಾಗಿವೆ.
ತನ್ನ ಈ ಅನಿಸಿಕೆಗೆ ಪೂರಕವಾಗಿ ಜೇಟ್ಲಿಯವರು, ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ಕಳೆದ ವರ್ಷದ ಮೇ ತಿಂಗಳಲ್ಲಿ ಬರೆದ ಪತ್ರವೊಂದರಲ್ಲಿ ಕಾನೂನು ವೃತ್ತಿವಲಯದ ತನ್ನ ಮಾಜಿ ಸಹೋದ್ಯೋಗಿಯೆನ್ನಲಾದವರು ಬರೆದಿದ್ದ ಅನಾಮಿಕ ಪತ್ರದ ಟಿಪ್ಪಣಿಯೊಂದನ್ನು ಕೂಡಾ ಲಗತ್ತಿಸಿದ್ದಾರೆ.
2014ರಲ್ಲಿ ಮೋದಿ ಪ್ರಧಾನಿಯಾಗಿ ಅಕಾರ ಸ್ವೀಕರಿಸಿದ ಸಂದರ್ಭದಲ್ಲಿ ‘‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’’ ಎಂಬ ಭರವಸೆ ನೀಡಿದ್ದರು. ಆದರೆ, ಕೇಂದ್ರ ಸಂಪುಟದ ಹಲವಾರು ಖಾತೆಗಳನ್ನು ನಿಭಾಯಿಸುತ್ತಿರುವ ಈ ಪ್ರಭಾವಿ ಸಚಿವ, ತನ್ನದೇ ಸರಕಾರದ ಪ್ರಮಾದಕರ ಆಡಳಿತದ ನಿದರ್ಶನಗಳ ಬಗ್ಗೆ ಬೆಟ್ಟು ಮಾಡಲು ತನ್ನ ಪತ್ರದೊಂದಿಗೆ ಅನಾಮಿಕ ಟಿಪ್ಪಣಿಯೊಂದನ್ನು ಲಗತ್ತಿಸಿರುವುದು ದಕ್ಷ, ನಿರ್ಣಾಯಾತ್ಮಕ ಸರಕಾರವನ್ನು ಮುನ್ನಡೆಸುವೆನೆಂಬ ಮೋದಿಯ ಘೋಷಣೆಗೆ ಕರಿನೆರಳು ಆವರಿಸುವಂತೆ ಮಾಡಿದೆ.
ಖ್ಯಾತ ಅಂತರ್‌ರಾಷ್ಟ್ರೀಯ ಜಾಲತಾಣ ‘ದಿ ವೈರ್’ ಇದೇ ಮೊದಲ ಬಾರಿಗೆ ಜೇಟ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಬರೆದಿರುವ ಪತ್ರವನ್ನು ಪ್ರಕಟಿಸಿದೆ.
ವಿವಿಧ ವ್ಯಾವಹಾರಿಕ ಒಪ್ಪಂದಗಳಿಗೆ ಸಂಬಂಸಿದೈನಂದಿನ ಆಧಾರದಲ್ಲಿ ಮಾತುಕತೆಗಳನ್ನು ಗಮನಿಸಲು ಯಾವುದೇ ಸಮನ್ವಯ ಸಚಿವಾಲಯವಿಲ್ಲ ಹಾಗೂ ಈ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿದೆಯೆಂದು ಪತ್ರದಲ್ಲಿ ಗಮನಸೆಳೆಯಲಾಗಿದೆ.
ಕೋಟ್ಯಂತರ ಡಾಲರ್‌ಗಳಷ್ಟು ತೆರಿಗೆಪಾವತಿದಾರರ ಹಣವನ್ನು ಒಳಗೊಂಡ ಈ ಸಂಧಾನ ಮಾತುಕತೆಗಳನ್ನು ಅತ್ಯಂತ ಕಳಪೆ ರೀತಿಯಲ್ಲಿ ನಿಭಾಯಿಸಲಾಗುತ್ತಿದೆಯೆಂದು ವಿತ್ತ ಸಚಿವರು ಕಳುಹಿಸಿರುವ ಟಿಪ್ಪಣಿಯಲ್ಲಿ ಹೇಳಲಾಗಿದೆ. ಈ ಪತ್ರದ ಮೂಲಕ ತಾನು ಸಾರ್ವಜನಿಕ ನಿಯ ಚೌಕಿದಾರ ಅಥವಾ ಕಾವಲುಗಾರನಾಗಿ ಕೆಲಸ ಮಾಡುವೆನೆಂಬ ಮೋದಿಯವರ ಭರವಸೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಮೋದಿ ಸರಕಾರವು ಅಕಾರಕ್ಕೇರಿದ ಮೂರು ವರ್ಷಗಳ ಬಳಿಕ ಜೇಟ್ಲಿ ಈ ‘ದೋಷಾರೋಪ ಮಾಡಿದ್ದಾರೆ. ಅಂದರೆ, ಒಂದು ವೇಳೆ ತನ್ನ ಪೂರ್ವಾಕಾರಿಗಳಿಂದ ಪ್ರಮಾದಗಳಾಗಿದ್ದರೂ, ಅದನ್ನು ಸರಿಪಡಿಸಲು ಮೋದಿಯವರಿಗೆ ಈ ಮೂರು ವರ್ಷಗಳು ಸಾಕಾಗಬಹುದಿತ್ತು.
 ವೊಡಾಪೋನ್ ಪ್ರಕರಣವಲ್ಲದೆ, ಗಣಿಗಾರಿಕಾ ಸಚಿವಾಲಯ, ಕೈರ್ನ್ ಹಾಗೂ ವೇದಾಂತ ಕಂಪೆನಿಗಳ ಪ್ರಕರಣಗಳು, ತಮಿಳುನಾಡು ಸರಕಾರವು ಒಳಗೊಂಡಿರುವ ನಿಸಾನ್ ಸೇರಿದಂತೆ ಕೆಲವು ಮಹತ್ವದ ಪ್ರಕರಣಗಳ ನಿರ್ವಹಣೆಯಲ್ಲಿ ಕೇಂದ್ರ ಸರಕಾರದ ಲೋಪವನ್ನು ಈ ಪತ್ರದ ಜೊತೆ ಲಗತ್ತಿಸಲಾದ ಟಿಪ್ಪಣಿಯು ಬೆಟ್ಟು ಮಾಡಿದೆ.
ಈ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದಲ್ಲಿ ಭಾರತದ ಗಣರಾಜ್ಯದ ಮೇಲೆ ಅಗಾಧವಾದ ವಿತ್ತೀಯ ದುಷ್ಪರಿಣಾಮಗಳು ಉಂಟಾಗುವುದರಲ್ಲಿ ಸಂದೇಹವಿಲ್ಲವೆಂದು ಈ ಅನಾಮಿಕ ಟಿಪ್ಪಣಿಯು ಹೇಳಿದೆ.
ಈ ಟಿಪ್ಪಣಿಯನ್ನು ಜೇಟ್ಲಿಯವರು ತನ್ನ ಪತ್ರದ ಜೊತೆ ಲಗತ್ತಿಸಿ, ಮಿಶ್ರಾ ಅವರಿಗೆ ಕಳುಹಿಸಿಕೊಟ್ಟಿರುವುದರಿಂದ ಅದಕ್ಕೆ ಅವರ ಬೆಂಬಲವಿರುವಂತೆ ಕಂಡುಬರುತ್ತದೆ. ಭಾರತ ಸರಕಾರವು ನಿಯೋಜಿಸಿರುವ ವಕೀಲರುಗಳು ಸಮರ್ಥರಲ್ಲವೆಂಬುದನ್ನು ಈ ಟಿಪ್ಪಣಿಯು ಸೂಚಿಸುತ್ತದೆ. ವೊಡಾೆನ್ ಪ್ರಕರಣದಲ್ಲಿ ಬ್ರಿಟನ್‌ನ ಎಸ್ಸೆಕ್ಸ್ ನ್ಯಾಯಾಲಯದಲ್ಲಿ ಭಾರತ ಸರಕಾರವನ್ನು ಪ್ರತಿನಿಸಲು ಬ್ರಿಟನ್‌ನ ಖ್ಯಾತ ನ್ಯಾಯವಾದಿಗಳನ್ನು ನೇಮಿಸಬೇಕೆಂದು ಪತ್ರವು ಆಗ್ರಹಿಸಿದೆ. ವೊಡಾೆನ್ ಪ್ರಕರಣಕ್ಕೆ ಸಂಬಂಸಿ ವಿವಾದಗಳಿಂದ ಹೊರತಾಗಿರುವ ಹಾಗೂ ಭಾರತವನ್ನು ಇತರ ಪ್ರಕರಣಗಳಲ್ಲಿ ಪ್ರತಿನಿಸಿರುವ ಸಲೀಂ ಮುಲ್ಲಾನ್ ಅವರ ಹೆಸರನ್ನು ಪರಿಗಣಿಸಬಹುದಾಗಿದೆಯೆಂದು ಟಿಪ್ಪಣಿಯು ಸಲಹೆ ಮಾಡಿದೆ. ಅಂದ ಹಾಗೆ ಜೇಟ್ಲಿ ಯವರು ತನಗೆ ಪತ್ರ ಬರೆದಿರುವ ತನ್ನ ಮಾಜಿ ಸಹೋದ್ಯೋಗಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಬ್ರಿಟನ್‌ನಲ್ಲಿ ಪ್ರಕರಣದ ತನಿಖೆಗೆ ಶುಲ್ಕ ದುಬಾರಿಯಾಗಿದ್ದರೂ ಚಿಂತೆಯಿಲ್ಲ, ಉನ್ನತ ಮಟ್ಟದ ನ್ಯಾಯವಾದಿಯನ್ನು ಗೊತ್ತುಪಡಿಸಬೇಕೆಂದು, ಆತ ತನ್ನ ಟಿಪ್ಪಣಿಯಲ್ಲಿ ಪ್ರತಿಪಾದಿಸಿದ್ದಾರೆ.
ಅತ್ಯಂತ ಜಟಿಲವಾದ ನೂರಾರು ಕೋಟಿ ಡಾಲರ್‌ಗಳ ವೊಡಾೆನ್ ಪ್ರಕರಣದಲ್ಲಿ ವಾದಿಸಲು ಸಲೀಂ ಮುಲ್ಲಾನ್ ಅವರಲ್ಲದೆ ಜೋ ಸ್ಮೊಹುವಾ, ಪೀಟರ್ ಗೋಲ್ಡ್ ಸ್ಮಿತ್, ವೌರಿಸ್ ಮೆಂಡೆಲ್ಸನ್ ಅವರ ಹೆಸರುಗಳನ್ನೂ ಕೂಡಾ ಟಿಪ್ಪಣಿಪತ್ರದಲ್ಲಿ ಉಲ್ಲೇಖಿಸಲಾಗಿದೆ.
 ಈ ಪ್ರಕರಣಗಳ ಕಳಪೆ ನಿರ್ವಹಣೆಯಿಂದ ಕೇಂದ್ರ ಸರಕಾರದ ಬೊಕ್ಕಸದ ಮೇಲೆ ಭಾರೀ ಪರಿಣಾಮವಾಗಿರುವ ಬಗ್ಗೆ ಜೇಟ್ಲಿ ತನ್ನ ಪತ್ರದಲ್ಲಿ ಗಮನಸೆಳೆದಿದ್ದಾರೆ. ತನ್ನ ಸಂಪುಟದ ವಿತ್ತ ಸಚಿವರು ಬೆಟ್ಟು ಮಾಡಿ ತೋರಿಸಿರುವ ಅಸಮರ್ಥತೆಯ ನಿದರ್ಶನಗಳನ್ನು ಸರಿಪಡಿಸಲು ಮೋದಿ ಯಾವ ಕ್ರಮ ಕೈಗೊಂಡಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅರುಣ್ ಜೇಟ್ಲಿಯವರು ಸುಪ್ರೀಂಕೋರ್ಟ್‌ನ ಪ್ರಮುಖ ನ್ಯಾಯವಾದಿ ಗಳಲೊಬ್ಬರು. ಆದರೆ ವಿವಿಧ ಪ್ರಕರಣಗಳಲ್ಲಿ ಭಾರತವನ್ನು ಪ್ರತಿನಿಸುವ ಕಾನೂನು ಅಕಾರಿಗಳ ತಂಡವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಭಾರತದ ಪರವಾಗಿ ವಾದಿಸಲು ಜೇಟ್ಲಿಯವರೇ ಖುದ್ದಾಗಿ ಪ್ರತಿಷ್ಠಿತ ನ್ಯಾಯವಾದಿಗಳನ್ನು ನಿಯೋಜಿಸಿದ್ದರು.

ಕುತೂಹಲಕರವೆಂದರೆ, ಜೇಟ್ಲಿಯವರು ರಾಜ್ಯಸಭೆಯಲ್ಲಿ ನಾಯಕನಾಗಿ ಆಯ್ಕೆ ಯಾಗುವವರೆಗೆ ಅವರು ತೆರಿಗೆಗೆ ಸಂಬಂಸಿದ ವಿಷಯಗಳಲ್ಲಿ ವೊಡಾಪೋನ್‌ನ ನ್ಯಾಯವಾದಿಯಾ ಗಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವೌಲ್ಯದ ಸಚಿವನಾಗಿ ತಾನು ವೊಡಾೆನ್ ಪ್ರಕರಣದ ನಿರ್ವಹಣೆಯಿಂದ ದೂರವುಳಿಯುವುದಾಗಿ ಹೇಳಿದ್ದರು. ಜೇಟ್ಲಿ ತನ್ನ ಪತ್ರದೊಂದಿಗೆ ಲಗತ್ತಿಸಿರುವ ಟಿಪ್ಪಣಿಯು, ವಿವಿಧ ಪ್ರಕರಣಗಳಲ್ಲಿ ಸರಕಾರವನ್ನು ಪರಿಣಾಮಕಾರಿಯಾಗಿ ಪ್ರತಿನಿಸಲು ಹಾಗೂ ಪ್ರಮುಖ ಸರಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿತ್ತ, ವಿದೇಶಾಂಗ ವ್ಯವಹಾರ ಹಾಗೂ ಸಂಬಂಧಪಟ್ಟ ಸಚಿವಾಲಯವನ್ನು ಒಳಗೊಂಡ ಅಂತರ್ ಸಚಿವಾಂಗ ಸಮಿತಿಯ ಸ್ಥಾಪನೆಗೆ ಆಗ್ರಹಿಸಿದೆ.
ದೇಶದೊಳಗೆ ಹಾಗೂ ದೇಶದ ಹೊರಗಿನ ವ್ಯವಹಾರಗಳಲ್ಲಿ ಪರಿಣತಿಯನ್ನು ಹೊಂದಿರುವ ನ್ಯಾಯವಾದಿ ಯನ್ನು ನಿಯೋಜಿಸುವುದಕ್ಕಾಗಿ ಸಮಿತಿಯನ್ನು ಸಬಲೀಕರಣಗೊಳಿಸ ಬೇಕಾಗಿದ್ದು, ಕಡಿಮೆ ಶುಲ್ಕದ ಆಧಾರದಲ್ಲಿ ವಕೀಲರನ್ನು ನೇಮಿಸುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕೆಂದು ಟಿಪ್ಪಣಿಯು ಪ್ರತಿಪಾದಿಸಿದೆ.
ಬೃಹತ್ ಮೊತ್ತದ ಹಣಕಾಸು ವ್ಯವಹಾರಗಳಿಗೆ ಸಂಬಂ ಸಿದ ಪ್ರಕರಣಗಳಲ್ಲಿ ಭಾರತವು ಸಮರ್ಥವಾಗಿ ವಾದಿಸುವ ಅಗತ್ಯವಿ ದೆಯೆಂಬ ಬಗ್ಗೆ ಯಾರೂ ಕೂಡಾ ಸರಕಾರದಲ್ಲಿರುವ ಕಾಳಜಿ ವಹಿಸಿರುವಂತೆ ಕಂಡುಬರುವುದಿಲ್ಲ. ದೇಶದ, ಈ ಆಘಾತಕಾರಿ ಸ್ಥಿತಿಯ ಬಗ್ಗೆ ಚೆನ್ನಾಗಿ ಅರಿವಿರುವ ನ್ಯಾಯವಾದಿಯೊಬ್ಬರು, ಇದು ಮೂರ್ಖತನವೇ ಅಥವಾ ಜಿಪುಣತನವೇ ಎಂದು ಪ್ರಶ್ನಿಸಿ ದ್ದಾರೆ. ಈ ವ್ಯಕ್ತಿಗಳು ಭಾರತ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದೊಯ್ದ ವ್ಯಕ್ತಿಗಳಿಗೇ ನೆರವಾಗುತ್ತಿದ್ದಾರೆಯೇ ಎಂಬಂತಹ ಭಾವನೆಯುಂಟಾಗುತ್ತಿದೆ. ಸಾರ್ವಜನಿಕ ಹಣವನ್ನು ಜೋಪಾ ನವಾಗಿ ಕಾಯುತ್ತೇನೆಂಬ ಘೋಷಣೆಗಳು ಕೇವಲ ಕಣ್ಣೊರೆಸುವ ತಂತ್ರವಾಗಿದೆಯೇ ಎಂಬ ಸಂದೇಹ ಕಾಡುತ್ತಿದೆಯೆಂದು ಅವರು ಹೇಳಿದ್ದಾರೆ.
ಸರಕಾರದ ವೈಲ್ಯವೊಂದು ಪುನರಾವರ್ತನೆಯಾಗುತ್ತಿರುವ ಬಗ್ಗೆ, ಸಂಪುಟದ ಪ್ರಭಾವಿ ಸಚಿವರಲ್ಲೊಬ್ಬರು ಬೆಟ್ಟು ಮಾಡಿ ತೋರಿಸಿರುವುದು ಪರಿಸ್ಥಿತಿಯ ಗಂಭೀರತೆಗೊಂದು ನಿದರ್ಶನವಾಗಿದೆ. 

Writer - ಸ್ವಾತಿ ಚತುರ್ವೇದಿ

contributor

Editor - ಸ್ವಾತಿ ಚತುರ್ವೇದಿ

contributor

Similar News

ಜಗದಗಲ
ಜಗ ದಗಲ