ಪಂಜಾಬ್‌ಗೆ ಜಯ

Update: 2018-04-08 18:28 GMT

ಮೊಹಾಲಿ, ಎ.8: ಕರ್ನಾಟಕದ ಲೋಕೇಶ್ ರಾಹುಲ್ ದಾಖಲಿಸಿದ ವೇಗದ ಅರ್ಧಶತಕ ನೆರವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಂದು ನಡೆದ ಐಪಿಎಲ್‌ನ ಟ್ವೆಂಟಿ -20 ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.

ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 167 ರನ್‌ಗಳ ಸವಾಲನ್ನು ಪಡೆದ ಪಂಜಾಬ್ ತಂಡ 18.5 ಓವರ್‌ಗಳಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.

ಲೋಕೇಶ್ ರಾಹುಲ್ 16ಎಸೆತಗಳಲ್ಲಿ 51 ರನ್(6ಬೌ, 4ಸಿ) ಮತ್ತು ಕರುಣ್ ನಾಯರ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾದರು.

     ಪಂಜಾಬ್ ತಂಡ ನಾಲ್ಕನೇ ಓವರ್‌ನಲ್ಲಿ ಆರಂಭಿಕ ದಾಂಡಿಗ ಮಾಯಾಂಕ್ ಅಗರ್ ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ರಾಹುಲ್ ಅವರು 14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಟ್ರೆಂಟ್ ಬೌಲ್ಟ್ ಅವರ ಒಂದೇ ಓವರ್‌ನಲ್ಲಿ 16 ರನ್‌ಗಳನ್ನು ರಾಹುಲ್ ಕಬಳಿಸಿದರು. ಅವರ ನಿರ್ಗಮಿಸಿದ ಬಳಿಕ ಕರುಣ್ ನಾಯರ್ ಅರ್ಧಶತಕ ದಾಖಲಿಸಿದರು. ಅಂತಿಮವಾಗಿ ಡೇವಿಡ್ ಮಿಲ್ಲರ್ ಔಟಾಗದೆ 24 ರನ್ ಮತ್ತು ಮಾರ್ಕುಸ್ ಸ್ಟೋನಿಸ್ ಔಟಾಗದೆ 22 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಜಯಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎದುರಾಳಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು.

ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತ್ತು, ನಾಯಕ ಗೌತಮ್ ಗಂಭೀರ್ (55) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News