×
Ad

ಮೇವು ಹಗರಣ ಪ್ರಕರಣ : 37 ಜನರು ತಪ್ಪಿತಸ್ಥರು; ನ್ಯಾಯಾಲಯದ ತೀರ್ಪು

Update: 2018-04-09 23:25 IST

ರಾಂಚಿ,ಎ.9: 1991-92 ಮತ್ತು 1995-96ರ ನಡುವೆ ಡುಮ್ಕಾ ಸರಕಾರಿ ಖಜಾನೆಯಿಂದ 34.92 ಕೋ.ರೂ.ಗಳ ಅಕ್ರಮ ಹಿಂದೆಗೆತಕ್ಕೆ ಸಂಬಂಧಿಸಿದ ಮೇವು ಹಗರಣ ಪ್ರಕರಣವೊಂದರಲ್ಲಿ 37 ಜನರನ್ನು ದೋಷಿಗಳನ್ನಾಗಿ ಘೋಷಿಸಿ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.

ನ್ಯಾ.ಶಿವಪಾಲ ಸಿಂಗ್ ಅವರು ಪ್ರಕರಣದಲ್ಲಿ ಐವರನ್ನು ಖುಲಾಸೆಗೊಳಿಸಿದರು. ಪಶು ಸಂಗೋಪನೆ ಇಲಾಖೆ ಮತ್ತು ಸರಕಾರಿ ಖಜಾನೆಯ ಮಾಜಿ ಅಧಿಕಾರಿಗಳು ಮತ್ತು ಮೇವು ಪೂರೈಕೆದಾರರು ದೋಷನಿರ್ಣಯಗೊಂಡ ವ್ಯಕ್ತಿಗಳಲ್ಲಿ ಸೇರಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣದ ಕುರಿತು ವಾದವಿವಾದಗಳು ಮಂಗಳವಾರದಿಂದ ಆರಂಭಗೊಳ್ಳಲಿವೆ.

2001ರಲ್ಲಿ ಪಾಟ್ನಾದ ವಿಶೇಷ ನ್ಯಾಯಾಲಯದಲ್ಲಿ 72 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು. ರಾಜ್ಯದ ವಿಭಜನೆಯ ಬಳಿಕ ಪ್ರಕರಣವು ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಆರೋಪಿಗಳ ಪೈಕಿ 17 ಜನರು ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರೆ ಓರ್ವನನ್ನು ಉಚ್ಚ ನ್ಯಾಯಾಲಯವು ಆರೋಪಮುಕ್ತಗೊಳಿಸಿತ್ತು. ಐವರು ಆರೋಪಿಗಳು ವಿಚಾರಣೆಯ ಅವಧಿಯಲ್ಲಿ ಮಾಫಿ ಸಾಕ್ಷಿದಾರರಾಗಿ ಬದಲಾಗಿ ದ್ದರು.

ಐವರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News