ಅಮೆರಿಕ: ಶಿರವಸ್ತ್ರ ಧರಿಸಿದ ಬಾಲಕಿಯ ಮೇಲೆ ಹಲ್ಲೆ
Update: 2018-04-10 23:58 IST
ವಾಶಿಂಗ್ಟನ್, ಎ. 10: ಅಮೆರಿಕದ ವರ್ಜೀನಿಯ ರಾಜ್ಯದಲ್ಲಿ ಶಿರವಸ್ತ್ರ ಧರಿಸಿದ್ದ 13 ವರ್ಷದ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸರು ಈ ಪ್ರಕರಣವನ್ನು ದ್ವೇಷಾಪರಾಧ ಎಂಬುದಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಬಾಲಕಿಯ ಧಾರ್ಮಿಕ ಬಟ್ಟೆಯ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಮಂಗಳವಾರ ವರದಿ ಮಾಡಿದೆ.