ಚೊಚ್ಚಲ ಗೇಮ್ಸ್ ಆಡಿದ ಹಿರಿಯ ಅಥ್ಲೀಟ್ ರಾಬರ್ಟ್

Update: 2018-04-10 18:47 GMT

ಗೋಲ್ಡ್‌ಕೋಸ್ಟ್, ಎ.10: ಕೆನಡಾದ 79ರ ಹರೆಯದ ರಾಬರ್ಟ್ ಪಿಟ್‌ಕೈರ್ನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ಅತ್ಯಂತ ಹಿರಿಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಸೋಮವಾರ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚೊಚ್ಚಲ ಗೇಮ್ಸ್ ಆಡಿದ ರೈಫಲ್ ಶೂಟರ್ ರಾಬರ್ಟ್ ಮೊದಲ ದಿನದ ಫೈನಲ್‌ನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. 79 ವರ್ಷ, 9 ತಿಂಗಳ ವಯಸ್ಸಿನ ರಾಬರ್ಟ್ 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ ಇಂಗ್ಲೆಂಡ್‌ನ ಡೊರೀನ್ ಫ್ಲಾಂಡರ್ಸ್ ನಿರ್ಮಿಸಿದ ದಾಖಲೆ ಮುರಿದರು. ಡೊರೀನ್ 79ನೆ ವರ್ಷಕ್ಕೆ ಕಾಲಿಟ್ಟ ಕೆಲವೇ ವಾರದ ಬಳಿಕ 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ಲಾನ್ ಬೌಲ್ಸ್‌ನಲ್ಲಿ ಸ್ಪರ್ಧಿಸಿದ್ದರು.

‘‘ನನಗೆ ಇಲ್ಲಿರಲು ತುಂಬಾ ಸಂತೋಷವಾಗುತ್ತಿದೆ. ನನ್ನ ಶೂಟಿಂಗ್ ವೃತ್ತಿಜೀವನದಲ್ಲಿ ಇದೊಂದು ಕೊನೆಯ ಮುಖ್ಯ ಟೂರ್ನಿಯಾಗಿದೆ’’ಎಂದು 1988ರಲ್ಲಿ ಪೈಲಟ್ ವೃತ್ತಿಯಿಂದ ನಿವೃತ್ತಿಯಾಗಿದ್ದ ಪಿಟ್‌ಕೈರ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News