ಶೂಟಿಂಗ್ ಡಬಲ್ ಟ್ರ್ಯಾಪ್‌:ಶ್ರೇಯಸಿ ಸಿಂಗ್ ಗೆ ಚಿನ್ನ

Update: 2018-04-11 05:57 GMT

ಗೋಲ್ಡ್ ಕೋಸ್ಟ್, ಎ.11: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ಮಹಿಳೆಯರ ಶೂಟಿಂಗ್ ನ ಡಬಲ್ ಟ್ರ್ಯಾಪ್‌ನಲ್ಲಿ ಭಾರತದ ಶ್ರೇಯಸಿ ಸಿಂಗ್ ಚಿನ್ನ ಪಡೆದಿದ್ದಾರೆ.

ಶ್ರೇಯಸಿ ಜೊತೆ ಸ್ಪರ್ಧಿಸಿದ್ದ ವರ್ಷಾ ವರ್ಮನ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಶ್ರೇಯಸಿ ಅವರು  ಒಟ್ಟು 96 +2 ಪಾಯಿಂಟ್ಸ್ ದಾಖಲಿಸಿ ಚಿನ್ನ ಪಡೆದರು. ಇದರೊಂದಿಗೆ ಶೂಟಿಂಗ್ ನಲ್ಲಿ ಭಾರತಕ್ಕೆ 4ನೇ ಚಿನ್ನ ಸಿಕ್ಕಿದೆ.

ಗ್ಲಾಸ್ಗೋದಲ್ಲಿ ಕಳೆದ  ಆವೃತ್ತಿಯ ಕಾಮನ್ ವೆಲ್ತ್ ನ ಮಹಿಳೆಯರ ಶೂಟಿಂಗ್ ಡಬಲ್ ಟ್ರ್ಯಾಪ್‌ನ ಫೈನಲ್‌ನಲ್ಲಿ  ಯುವ ಶೂಟರ್ ಶ್ರೇಯಸಿ ಸಿಂಗ್  ಒಟ್ಟು 92 ಅಂಕಗಳನ್ನು ದಾಖಲಿಸಿ ಬೆಳ್ಳಿ ಪದಕ  ಜಯಿಸಿದ್ದರು. ಇದೀಗ ಪ್ರದರ್ಶನವನ್ನು  ಉತ್ತಮಪಡಿಸಿ ಚಿನ್ನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News