ಕಾಶ್ಮೀರದಲ್ಲಿ ‘ಮಾನವಹಕ್ಕು ಉಲ್ಲಂಘನೆ’ ಖಂಡಿಸಿ ಪಾಕ್ ನಿರ್ಣಯ
Update: 2018-04-11 23:17 IST
ಇಸ್ಲಾಮಾಬಾದ್, ಎ. 11: ಕಾಶ್ಮೀರದಲ್ಲಿ ‘ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆ’ಗಳನ್ನು ಖಂಡಿಸಿ ಪಾಕಿಸ್ತಾನದ ಸಂಸತ್ತು ಬುಧವಾರ ಅವಿರೋಧವಾಗಿ ನಿರ್ಣಯವೊಂದನ್ನು ಅಂಗೀಕರಿಸಿದೆ. ಅದೇ ವೇಳೆ, ಕಣಿವೆಗೆ ಸತ್ಯ ಶೋಧನಾ ತಂಡವೊಂದನ್ನು ಕಳುಹಿಸುವಂತೆಯೂ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗವನ್ನು ನಿರ್ಣಯವೊ ಒತ್ತಾಯಿಸಿದೆ.
ಪಾಕಿಸ್ತಾನದ ಕಾಶ್ಮೀರ ವ್ಯವಹಾರಗಳ ಸಚಿವ ಬರ್ಜೀಸ್ ತಾಹಿರ್ ನ್ಯಾಶನಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಮಂಡಿಸಿದರು.
ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸುವಂತೆಯೂ ನಿರ್ಣಯವು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.