ದೈತ್ಯ 90 ಸಾವಿರ ಹಳೆಯ ಬೆರಳಿನ ಮೂಳೆ ಪತ್ತೆ

Update: 2018-04-11 18:41 GMT

90 ಸಾವಿರ ವರ್ಷ ಹಳೆಯ ಬೆರಳಿನ ಮೂಳೆ ಅವಶೇಷವನ್ನು ಸೌದಿ ಅರೇಬಿಯಾದ ನೆಫುದ್ ಮರುಭೂಮಿಯಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅವಶೇಷದಿಂದ ನಮ್ಮ (ಹೋಮೋಸೆಫಿಯನ್ಸ್) ಪ್ರಭೇದ ಆಫ್ರಿಕಾ ದಾರಿಯಾಗಿ ಹೊರಬಂದು ಜಗತ್ತನ್ನು ಹೇಗೆ ಆಳಿದವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಅಲ್ ವುಸ್ತಾ ಎಂದು ಕರೆಯಲಾಗುವ ನಿವೇಶನದಲ್ಲಿ ಪ್ರೌಢ ವ್ಯಕ್ತಿಯ ಮಧ್ಯ ಬೆರಳಿನ ಮಧ್ಯ ಎಲುಬು ಪತ್ತೆಯಾಗಿದೆ ಎಂದು ಸಂಶೋಧಕರು ಸೋಮವಾರ ತಿಳಿಸಿದ್ದಾರೆ. ಇದು ಆಫ್ರಿಕಾ ಹಾಗೂ ಪೂರ್ವ ಮೆಡಿಟರೇನಿಯನ್ ಲಿವೆಂಟ್ ವಲಯದ ಹೊರಗೆ ಪತ್ತೆಯಾದ ಹೋಮೋಸೆಫಿಯನ್ಸ್‌ನ ಅತಿ ಪ್ರಾಚೀನ ಪಳೆಯುಳಿಕೆ. ಅಲ್ಲದೆ ಅರೇಬಿಯನ್ ದ್ವೀಪಕಲ್ಪದಲ್ಲಿ ಪತ್ತೆಯಾದ ಮೊದಲ ಪ್ರಾಚೀನ ಮಾನವನ ಪಳೆಯುಳಿಕೆ.
  ಮಾನವ ಪ್ರಭೇದಗಳು ಆಫ್ರಿಕಾದಲ್ಲಿ ಸುಮಾರು 300,000 ವರ್ಷಗಳ ಹಿಂದೆ ಕಾಣಿಸಿ ಕೊಂಡವು. 60 ಸಾವಿರ ವರ್ಷಗಳ ಹಿಂದೆ ಹೋಮೋಸೆಫಿಯನ್ಸ್ ಗಳು ಆಫ್ರಿಕಾದಿಂದ ವ್ಯಕ್ತಿಯಾಗಿ, ಸಮೂಹವಾಗಿ ನಿರ್ಗಮಿಸಿದವು. ಕಡಲ ತೀರದಲ್ಲಿ ಪ್ರಯಾಣಿಸಿದರು, ಸಮುದ್ರದ ಸಂಪನ್ಮೂಲಗಳನ್ನು ಆಹಾರಕ್ಕಾಗಿ ಬಳಸಿದರು ಎಂದು ಮಾನವ ಚರಿತ್ರೆಯ ವಿಜ್ಞಾನಕ್ಕಿರುವ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನ ಮಾನವ ಶಾಸ್ತ್ರಜ್ಞ ಮೈಕೆಲ್ ಪೆಟ್ರಾಗ್ಲಿಯಾ ತಿಳಿಸಿದ್ದಾರೆ.
ದೊರೆತೆ ಪಳೆಯುಳಿಕೆ ಮಾನವ ಬೆರಳಿನ ನಡುವಿನ ಎಲುಬು 1.2 ಇಂಚು ಉದ್ದ ಇದೆ. ಇದು ಆಫ್ರಿಕಾದಲ್ಲಿ ಈ ಹಿಂದೆ ನಮ್ಮ ಪ್ರಬೇಧಗಳು ಅಸ್ತಿತ್ವದಲ್ಲಿದ್ದುವು ಎಂಬುದನ್ನು ತಿಳಿಸುತ್ತದೆ. ‘‘ಇದು ನಮ್ಮವರು 60 ಸಾವಿರ ವರ್ಷಗಳ ಹಿಂದೆ ಏಕಾಂಗಿಯಾಗಿ ಕ್ಷಿಪ್ರ ಪ್ರಸರಣಗೊಂಡರು ಎಂಬ ಮಾದರಿಗೆ ಬೆಂಬಲ ನೀಡುವುದಿಲ್ಲ. ಬದಲಾಗಿ ವಲಸೆಯ ಅತ್ಯಧಿಕ ಸಂಕೀರ್ಣ ಸನ್ನಿವೇಶಗಳನ್ನು ತಿಳಿಸುತ್ತದೆ. ಈಗಿನ ಸಂಶೋಧನೆ ಹಾಗೂ ಕಳೆದ ಕೆಲವು ವರ್ಷಗಳ ಹಿಂದಿನ ಸಂಶೋಧನೆಗಳು ಕಳೆದ 1 ಲಕ್ಷ ವರ್ಷಗಳಲ್ಲಿ ಆಫ್ರಿಕಾದಿಂದ ಹಲವು ಬಾರಿ ಹೋಮೋಸೆಫಿಯನ್ಸ್‌ಗಳು ವಲಸೆ ಹೋಗಿದ್ದಾರೆ.’’ ಎಂದು ಪೆಟ್ರಾಗ್ಲಿಯಾ ಹೇಳಿದ್ದಾರೆ.
ಇವರು ಕರಾವಳಿ ತೀರದಲ್ಲಿ ಮಾತ್ರ ಪ್ರಸರಣ ವಾಗಲಿಲ್ಲ, ಇತರ ಭಾಗಗಳಲ್ಲೂ ಪ್ರಸರಣವಾದರು ಎಂದು ಪೆಟ್ರಾಗ್ಲಿಯಾ ಹೇಳಿದ್ದಾರೆ. ಅಲ್ಲದೆ ೇಂಡಾಮೃಗ, ಕಾಡು ಬೆಕ್ಕು, ಚಿಗರೆ, ಆಸ್ಟ್ರಿಚ್ ಮೊದಲಾದ ಹಲವು ಪ್ರಾಣಿಗಳ ಪಳೆಯುಳಿಕೆಗಳು ಪತ್ತೆಯಾಗಿವೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಪುರಾತತ್ವ ಶಾಸ್ತ್ರಜ್ಞ ಹೂವ್ ಗ್ರೋಕಟ್ ಹೇಳಿದ್ದಾರೆ. ಎಲುಬುಗಳಲ್ಲಿ ಕಂಡು ಬಂದ ಕಚ್ಚಿದ ಗುರುತುಗಳು ಆ ಸಂದರ್ಭ ಮಾಂಸಾಹಾರಿ ಪ್ರಾಣಿಗಳು ಜೀವಿಸಿದ್ದವು ಎಂಬುದಕ್ಕೆ ಪುರಾವೆ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News