×
Ad

ಐಪಿಎಲ್: ಡಿವಿಲಿಯರ್ಸ್ ಅರ್ಧಶತಕ, ಆರ್‌ಸಿಬಿಗೆ ಜಯ

Update: 2018-04-13 23:43 IST

ಬೆಂಗಳೂರು, ಎ.13: ಐಪಿಎಲ್‌ನ 8ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 158 ರನ್ ಗುರಿ ಪಡೆದ ಆತಿಥೇಯ ಆರ್‌ಸಿಬಿ ತಂಡ ಎಬಿಡಿವಿಲಿಯರ್ಸ್ ಅರ್ಧಶತಕದ(57,40 ಎಸತ, 2 ಬೌಂಡರಿ, 4 ಸಿಕ್ಸರ್) ನೆರವಿನಿಂದ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಗಳಿಸಿತು.

ಆರ್‌ಸಿಬಿ ಆರಂಭ ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಮೊದಲ ಓವರ್‌ನ 2ನೇ ಎಸೆತದಲ್ಲಿ ಔಟಾದರು. ಇನ್ನೋರ್ವ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 45 ರನ್, ಮನ್‌ದೀಪ್ 22 ಹಾಗೂ ನಾಯಕ ವಿರಾಟ್ ಕೊಹ್ಲಿ 21 ರನ್ ಗಳಿಸಿದರು. ಅಶ್ವಿನ್(2-30) ಯಶಸ್ವಿ ಬೌಲರ್ ಎನಿಸಿಕೊಂಡರು.

 ಇದಕ್ಕೆ ಮೊದಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ ಕೆ.ಎಲ್. ರಾಹುಲ್(47) ಹಾಗೂ ನಾಯಕ ಆರ್. ಅಶ್ವಿನ್(33)ಹೋರಾಟದ ನೆರವಿನಿಂದ ಪಂಜಾಬ್ 19.2 ಓವರ್‌ಗಳಲ್ಲಿ 155 ರನ್ ಗಳಿಸಿ ಆಲೌಟಾಯಿತು.

   ಇನಿಂಗ್ಸ್ ಆರಂಭಿಸಿದ ರಾಹುಲ್(47,30 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಮಾಯಾಂಕ್ ಅಗರವಾಲ್(15) 3.1 ಓವರ್‌ಗಳಲ್ಲಿ 31 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು. ಅಗರವಾಲ್ ಔಟಾದ ಬಳಿಕ ರಾಹುಲ್‌ಗೆ ಕರುಣ್ ನಾಯರ್(29) ಸಾಥ್ ನೀಡಿದರು. ಈ ಇಬ್ಬರು 4ನೇ ವಿಕೆಟ್‌ಗೆ 58 ರನ್ ಸೇರಿಸಿದರು.

ಫಿಂಚ್(0), ಯುವರಾಜ್ ಸಿಂಗ್(4), ಸ್ಟೋನಿಸ್(11), ಅಕ್ಷರ್ ಪಟೇಲ್(2) ಬೇಗನೆ ಔಟಾದರು. ಪಂಜಾಬ್ ನಾಯಕ ಆರ್.ಅಶ್ವಿನ್(33,21 ಎಸೆತ, 3 ಬೌಂಡರಿ, 1 ಸಿಕ್ಸರ್) ಕೆಳ ಕ್ರಮಾಂಕದಲ್ಲಿ ಅಮೂಲ್ಯ ಕೊಡುಗೆ ನೀಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಬೆಂಗಳೂರು ಪರ ಉಮೇಶ್ ಯಾದವ್(3-23) ಯಶಸ್ವಿ ಬೌಲರ್ ಎನಿಸಿಕೊಂಡರು. ಖೆಜ್ರೊಲಿಯಾ(2-33), ಸುಂದರ್(2-22) ಹಾಗೂ ವೋಕ್ಸ್(2-36) ತಲಾ ಎರಡು ವಿಕೆಟ್ ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News