ಅಂಬೇಡ್ಕರ್ ಥಾಟ್ಸ್

Update: 2018-04-13 18:45 GMT

‘‘ಪ್ರಜಾಪ್ರಭುತ್ವವನ್ನು ಗಣರಾಜ್ಯ ಅಥವಾ ಸಂಸದೀಯ ಸರಕಾರಕ್ಕೆ ಸ್ವೀಕರಿಸಲಾಗುವುದಿಲ್ಲ ಪ್ರಜಾಪ್ರಭುತ್ವದ ಬೇರುಗಳು ಸಂಸದೀಯ ಅಥವಾ ಬೇರಾವುದೇ ರೀತಿಯ ಸರಕಾರದ ರೂಪದಲ್ಲಿಲ್ಲ. ಪ್ರಜಾಪ್ರಭುತ್ವ ಎಂದರೆ ಸಾಂಘಿಕ ಜೀವನದ ಒಂದು ಮಾದರಿ ಇದರ ಬೇರುಗಳನ್ನು ಸಾಮಾಜಿಕ ಸಂಬಂಧಗಳಲ್ಲಿ ಸಮಾಜವನ್ನು ರೂಪಿಸುವ ಮನುಷ್ಯರ ಸಂಬಂಧ ಹೊಂದಾಣಿಕೆಗಳಲ್ಲಿ ಹುಡುಕಬೇಕು.’’

***

 ‘‘ಒಂದು ಸಂಸದೀಯ ಸರಕಾರದಲ್ಲಿ ತೆರೆಯ ಮರೆಯಲ್ಲಿ ಏನನ್ನಾದರೂ ಮಾಡುವುದಾಗಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಆಶಯಗಳಂತೆ ಕಾರ್ಯ ಮಾಡುವುದಾಗಲಿ ಸಾಧ್ಯವಿಲ್ಲ ಪ್ರತಿಯೊಂದು ವಿಷಯವನ್ನು ಮಸೂದೆ ಅಥವಾ ನಿರ್ಣಯ ಇಲ್ಲವೇ ಗೊತ್ತುವಳಿಯ ರೂಪದಲ್ಲಿ ಲೋಕಸಭೆಯ ಮುಂದೆ ತರಲೇಬೇಕು.’’

***

‘‘ಪ್ರಜಾಪ್ರಭುತ್ವ ಸರಕಾರ ಎರಡು ಪಕ್ಷಗಳ ಮೂಲಕ ಕೆಲಸ ಮಾಡಿದಾಗ ಮಾತ್ರ ಅದು ಪ್ರಜಾಸತ್ತಾತ್ಮಕವಾಗಬಲ್ಲದು ಎಂದರೆ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಇನ್ನೊಂದು ವಿರೋಧ ಪಕ್ಷವಾಗಿರಬೇಕು.’’

***

‘‘ಪ್ರಾಚೀನ ಭಾರತದ ಇತಿಹಾಸವು ಇತಿಹಾಸವೇ ಅಲ್ಲ. ಅದರ ಅರ್ಥ ಭಾರತಕ್ಕೆ ಇತಿಹಾಸವೇ ಇಲ್ಲ ಎಂಬುದಲ್ಲ. ಪ್ರಾಚೀನ ಭಾರತಕ್ಕೆ ಸಾಕಷ್ಟು ಇತಿಹಾಸವಿದೆ. ಆದರೆ ಅದು ತನ್ನ ಗುಣವನ್ನು ಕಳೆದುಕೊಂಡಿದೆ. ಈ ಇತಿಹಾಸವನ್ನು ಮನೋರಂಜನೆ ಒದಗಿಸುವ ಬುರುಡೆ ಪುರಾಣವನ್ನಾಗಿ ಮಾಡಲಾಗಿದೆ. ಇದನ್ನು ಬ್ರಾಹ್ಮಣವಾದಿ ಬರಹಗಾರರು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ.’’

***

‘‘ಯಾವುದೇ ಒಂದು ಜನಾಂಗದ ಜೀವನದಲ್ಲಿ ರಾಜಕೀಯ ಅಧಿಕಾರ ಎನ್ನುವುದು ಬಹಳ ಅಮೂಲ್ಯವಾದದ್ದು. ಅದರಲ್ಲೂ ವಿಶೇಷವಾಗಿ ಆ ಜನಾಂಗದ ಸ್ಥಾನಮಾನಗಳು ಸವಾಲಿಗೆ ಒಳಪಟ್ಟಾಗ ಹಾಗೂ ಆ ಸವಾಲನ್ನು ಎದುರಿಸಿ ಅದು ತನ್ನ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಆ ಜನಾಂಗಕ್ಕೆ ಬೇಕಾದ ಸಾಧನವೆಂದರೆ ರಾಜಕೀಯ ಅಧಿಕಾರ ಮಾತ್ರ.’’

***

‘‘ಹಕ್ಕುಗಳನ್ನು ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯಿಂದ ರಕ್ಷಿಸಬೇಕು, ಕಾನೂನಿನಿಂದಲ್ಲ. ಕಾನೂನಿನ ಮೂಲಕ ಜಾರಿಗೆ ಬರುವ ಹಕ್ಕುಗಳನ್ನು ಸಮಾಜ ಮನ್ನಿಸಿದರೆ ಹಕ್ಕುಗಳು ಉಳಿಯುತ್ತವೆ. ಮೂಲಭೂತ ಹಕ್ಕುಗಳನ್ನು ಸಮಾಜ ವಿರೋಧಿಸಿದರೆ ಯಾವುದೇ ಪಾರ್ಲಿಮೆಂಟ್, ಯಾವುದೇ ನ್ಯಾಯಾಲಯವು ಹಕ್ಕುಗಳನ್ನು ನಿಜವಾದ ಅರ್ಥದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ.’’

***

‘‘ಮನುಷ್ಯನ ಮನಸ್ಸು ಮತ್ತು ಜಗತ್ತಿನ ಮನಸ್ಸು ಸುಧಾರಿಸದ ಹೊರತು ಪ್ರಪಂಚದ ಸುಧಾರಣೆ ಸಾಧ್ಯವಿಲ್ಲ.‘‘

***

‘‘ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮವು ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ತಮ್ಮ ನಾಯಕರ ಜಯಕಾರ ಮಾಡಲು ತಮಟೆ ಬಾರಿಸುವ ಹುಡುಗರು ಅದರಲ್ಲಿ ಬೆರೆಯುತ್ತಾರೆ.’’

***

‘‘ಅಸ್ಪೃಶ್ಯರು ತಮ್ಮ ಆತ್ಮಗೌರವವನ್ನು ಎಚ್ಚರಗೊಳಿಸಿ ತಮ್ಮ ಮಾನವ ಹಕ್ಕುಗಳಿಗಾಗಿ ನಿರಂತರ ಆಂದೋಲನವನ್ನು ಮೊದಲು ಪ್ರಾರಂಭ ಮಾಡಬೇಕಾಗಿದೆ. ನಿಮ್ಮಲ್ಲಿ ಎಂತಹ ಪ್ರಚಂಡ ಶಕ್ತಿ ಇದೆ ಎಂಬುದನ್ನು ನೀವಿನ್ನೂ ತಿಳಿದಿಲ್ಲ.’’

***

‘‘ನಾವು ದೌರ್ಜನ್ಯಕೋರರ ಮುಂದೆ ಮಂಡಿಯೂರಿ ಅತ್ಯಂತ ವಿನೀತ ಭಾವದಿಂದ ಪ್ರಾರ್ಥಿಸಿಕೊಳ್ಳುವುದರಿಂದ ಕಳೆದುಕೊಂಡಿರುವ ಹಕ್ಕುಗಳನ್ನು ಮರಳಿಗಳಿಸುವುದು ಅಸಾಧ್ಯ. ನಿರಂತರವಾದ ಪ್ರಾಮಾಣಿಕ ಹೋರಾಟದಿಂದ ಮಾತ್ರ ಆ ಹಕ್ಕುಗಳನ್ನು ಗಳಿಸಲು ಸಾಧ್ಯ. ಈ ಜನರು ಮೇಕೆಗಳನ್ನು ಬಲಿ ಕೊಡುತ್ತಾರೆಯೇ ಹೊರತು ಹುಲಿಗಳನ್ನಲ್ಲ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ