ಜಾವೆಲಿನ್ ಎಸೆತದಲ್ಲಿ ನೀರಜ್‌ಗೆ ಐತಿಹಾಸಿಕ ಚಿನ್ನ

Update: 2018-04-14 06:26 GMT

ಗೋಲ್ಡ್‌ಕೋಸ್ಟ್, ಎ.14: ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್ ಎಸೆತದಲ್ಲಿ ಭಾರತದ ಯುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಶನಿವಾರ ನಡೆದ ಜಾವೆಲಿನ್ ಎಸೆತದ ಫೈನಲ್‌ನಲ್ಲಿ 86.47 ಮೀ. ದೂರಕ್ಕೆ ಜಾವೆಲಿನ್ ಎಸೆದಿರುವ ಚೋಪ್ರಾ ಮೊದಲ ಸ್ಥಾನ ಪಡೆದರು. ಭಾರತಕ್ಕೆ 21ನೇ ಚಿನ್ನದ ಪದಕ ಗೆದ್ದುಕೊಟ್ಟರು. ಭಾರತದ ಒಟ್ಟು ಪದಕದ ಸಂಖ್ಯೆ 48ಕ್ಕೇರಿದೆ.

20ರ ಹರೆಯದ ನೀರಜ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಕೀರ್ತಿಗೆ ಭಾಜನರಾದರು. ಅಥ್ಲೆಟಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ನಾಲ್ಕನೇ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾದರು.

1958ರ ಕಾರ್ಡಿಫ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದಂತಕತೆ ಮಿಲ್ಕಾ ಸಿಂಗ್(440 ಮೀ. ಓಟ), 2010ರ ದಿಲ್ಲಿ ಗೇಮ್ಸ್‌ನಲ್ಲಿ ಕೃಷ್ಣಾ ಪೂನಿಯಾ(ಡಿಸ್ಕಸ್ ಎಸೆತ) ಹಾಗೂ 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ವಿಕಾಸ್ ಗೌಡ (ಡಿಸ್ಕಸ್ ಎಸೆತ) ಈ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News