ತೊಗಾಡಿಯಾ ಪದಚ್ಯುತಿಗಾಗಿಯೇ ವಿಎಚ್‌ಪಿ ಚುನಾವಣೆ?

Update: 2018-04-16 06:36 GMT

ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತದಾರರ ಪಟ್ಟಿಯನ್ನು ತಿರುಚಲಾಗಿದೆಯೆಂದು ವಿಶ್ವಹಿಂದೂ ಪರಿಷತ್‌ನ ಹಾಲಿ ಅಧ್ಯಕ್ಷ ಜಿ. ರಾಘವ ರೆಡ್ಡಿ ಆಪಾದಿಸಿದ್ದಾರೆ.

ವಿಶ್ವಹಿಂದೂ ಪರಿಷತ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಪದಚ್ಯುತಗೊಳಿಸುವ ತನ್ನ ಪ್ರಯತ್ನಕ್ಕೆ ಆರೆಸ್ಸೆಸ್ ಮರುಜೀವ ನೀಡಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದೆ. ಈ ಹಿಂದುತ್ವವಾದಿ ಸಂಘಟನೆಯ ನೂತನ ವರಿಷ್ಠರನ್ನು ಆಯ್ಕೆ ಮಾಡಲಿರುವ ಮತದಾರರ ಪಟ್ಟಿಯನ್ನು ತಿರುಚಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಜಿ. ರಾಘವ ರೆಡ್ಡಿ ಆಪಾದಿಸಿದ್ದಾರೆ.

ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾದ 212 ಸದಸ್ಯರ ಮೂಲ ಪಟ್ಟಿಗೆ ಒಟ್ಟು 37 ನಕಲಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ರೆಡ್ಡಿಯವರ ನಿಕಟವರ್ತಿಯಾದ ವಿಶ್ವ ಹಿಂದೂ ಪರಿಷತ್‌ನ ನಾಯಕರೊಬ್ಬರು ಆರೋಪಿಸಿದ್ದಾರೆ.
ಸಂಘಪರಿವಾರಕ್ಕೆ ಸೇರಿದ ಸಂಘಟನೆಗಳಲ್ಲಿ ವಿಶ್ವಹಿಂದೂ ಪರಿಷತ್ ಕೂಡಾ ಒಂದಾಗಿದೆ. ಗುರ್ಗಾಂವ್‌ನಲ್ಲಿ ಎಪ್ರಿಲ್ 14-15ರಂದು ನಡೆಯಲಿರುವ ವಿಶ್ವಹಿಂದೂ ಪರಿಷತ್‌ನ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ತೊಗಾಡಿಯಾ ಸ್ಪರ್ಸುತ್ತಿಲ್ಲವಾದರೂ, ಅದರ ಲಿತಾಂಶ ಮಾತ್ರ ತೊಗಾಡಿಯಾ ಮೇಲೆ ನೇರ ಪರಿಣಾಮ ಬೀರಲಿದೆ. ವಿಶ್ವಹಿಂದೂ ಪರಿಷತ್ ಅಧ್ಯಕ್ಷರನ್ನು ಅದರ ಸದಸ್ಯರು ಮತದಾನದ ಮೂಲಕ ಅಥವಾ ಅವಿರೋಧವಾಗಿ ಆಯ್ಕೆ ಮಾಡುತ್ತಾರೆ. ಹೀಗೆ ಆಯ್ಕೆಯಾದ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧ್ಯಕ್ಷರನ್ನು ನಾಮಕರಣ ಮಾಡುತ್ತಾರೆ. ಹೀಗೆ ನೇಮಕಗೊಳ್ಳುವ ಕಾರ್ಯನಿರ್ವಾಹಕ ಅಧ್ಯಕ್ಷರು, ಸಂಘಟನೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಜವಾಬ್ದಾರಿ ಹೊಂದಿರುತ್ತಾನೆ. 2011ರ ಡಿಸೆಂಬರ್‌ನಲ್ಲಿ ತನಗೆ ನಿಷ್ಠರಾಗಿರುವ ರಾಘವ ರೆಡ್ಡಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾಗಿ ಚುನಾಯಿತರಾದಾಗ, ಆ ತಿಂಗಳೇ ತೊಗಾಡಿಯಾ ಅವರು ವಿಶ್ವಹಿಂದೂ ಪರಿಷತ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನಾಮಕರಣಗೊಂಡಿದ್ದರು.ಅಂದಿನಿಂದ ಇಲ್ಲಿಯ ತನಕವೂ ತೊಗಾಡಿಯಾ ವಿಎಚ್‌ಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ಮುಂದುವರಿಯುತ್ತಾ ಬಂದಿದ್ದರು.
ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷೀಯ ಚುನಾವಣೆಗೆ ಆರೆಸ್ಸೆಸ್ ಬೆಂಬಲದೊಂದಿಗೆ ಸ್ಪರ್ಸುತ್ತಿರುವ ನಿವೃತ್ತ ಹೈಕೋರ್ಟ್ ನ್ಯಾಯಾೀಶ ಹಾಗೂ ಹಿಮಾಚಲಪ್ರದೇಶದ ರಾಜ್ಯಪಾಲ ವಿ.ಎಸ್. ಕೊಕ್‌ಜೆ ಅವರಿಗೆ ಬರೆದ ಪತ್ರವೊಂದರಲ್ಲಿ ರಾಘವ ರೆಡ್ಡಿ ಅವರು ಮತದಾರರ ಪಟ್ಟಿಯನ್ನು ತಿರುಚಲಾಗಿದೆಯೆಂದು ಮೊದಲ ಬಾರಿಗೆ ಆಪಾದಿಸಿದ್ದರು. ‘‘ ಅನರ್ಹ ಮತದಾರರನ್ನು ಒಳಗೊಂಡ ಮತದಾರರ ಪಟ್ಟಿಯನ್ನು ಸರಿಪಡಿಸದೆ ನಡೆಸುವ ಇಡೀ ಚುನಾವಣಾ ಪ್ರಕ್ರಿಯೆಯು, ವಿಎಚ್‌ಪಿಯ ಉಪಶಾಸನ (ಬೈಲಾ)ವು ಅಕ್ರಮವಾದುದು’’ ಎಂದು ರೆಡ್ಡಿ ಪತ್ರದಲ್ಲಿ ಬರೆದಿದ್ದರು. ಹೀಗಾಗಿ, ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಮೂಲಕ ಮತದಾರರ ಪಟ್ಟಿಯನ್ನು ಸರಿಪಡಿಸದೆ ಚುನಾವಣೆಗೆ ಮುಂದುವರಿಯದಂತೆ ಚುನಾವಣಾ ನಿರ್ವಹಣಾ ಅಕಾರಿಯವರನ್ನು ಕೋರಲಾಗಿದೆ’’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.


ವಿಶ್ವ ಹಿಂದೂ ಪರಿಷತ್‌ನ ಎಲ್ಲಾ ಸದಸ್ಯರು ಹಾಗೂ ಆರೆಸ್ಸೆಸ್‌ನ ಕೆಲವು ಹಿರಿಯ ನಾಯಕರಿಗೆ ಈ ಪತ್ರದ ಪ್ರತಿಗಳನ್ನು ಕಳುಹಿಸಿಕೊಡಲಾಗಿತ್ತು. ಆದಾಗ್ಯೂ, ತನ್ನ ಪರಿವಾರದ ಅತ್ಯಂತ ಪ್ರಮುಖ ಸಂಘಟನೆಯೊಂದರ ಅಧ್ಯಕ್ಷರು ವ್ಯಕ್ತಪಡಿಸಿದ ಆತಂಕಗಳಿಗೆ ಸ್ಪಂದಿಸಲು ಆರೆಸ್ಸೆಸ್ ಮುಂದಾಗಲಿಲ್ಲ.
  ಆರೆಸ್ಸೆಸ್ ನಾಯಕತ್ವದ ಒಂದು ವರ್ಗವು ತೊಗಾಡಿಯಾ ಬಗ್ಗೆ ಅಸಮಾಧಾನ ಹೊಂದಿದೆ. ಯಾಕೆಂದರೆ ಮೋದಿ ಜೊತೆಗೆ ಹಲವು ದಶಕಗಳಿಂದ ಭಿನ್ನಾಭಿಪ್ರಾಯವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯ ಜೊತೆಗಿನ ತನ್ನ ವಿಷಮ ಬಾಂಧವ್ಯವನ್ನು ಸರಿಪಡಿಸಲು ತೊಗಾಡಿಯಾ ನಿರಾಕರಿಸಿದ್ದರು. ಮೋದಿಗೆ ನಿಕಟವಾಗಿದೆಯೆಂದು ಹೇಳಲಾದ ಆರೆಸ್ಸೆಸ್ ನಾಯಕತ್ವದ ಈ ಬಣವು ಕಳೆದ ವರ್ಷದ ಡಿಸೆಂಬರ್ 29ರಂದು ಭುವನೇಶ್ವರದಲ್ಲಿ ನಡೆದ ವಿಎಚ್‌ಪಿಯ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ರಾಘವ ರೆಡ್ಡಿ ಅವರ ಸ್ಥಾನದಲ್ಲಿ ಕೊಕ್‌ಜೆಯವರನ್ನು ನೇಮಿಸುವ ನಿರ್ಣಯವನ್ನು ಕೈಗೊಂಡಿತು. ಆದರೆ ತೊಗಾಡಿಯಾ ಅವರು ನೂತನ ಅಧ್ಯಕ್ಷ ಆಯ್ಕೆಯನ್ನು ರಹಸ್ಯ ಮತದಾನದ ಮೂಲಕ ನಡೆಸಬೇಕೆಂದು ಪಟ್ಟುಹಿಡಿಯುವ ಮೂಲಕ ಟ್ರಸ್ಟ್‌ನ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದರು. ಒಂದು ವೇಳೆ ರಹಸ್ಯ ಮತದಾನ ನಡೆದು, ತೊಗಾಡಿಯಾ ಅಕಾರವನ್ನು ಉಳಿಸಿಕೊಂಡಲ್ಲಿ ತನಗೆ ಮುಜುಗರವಾದೀತೆಂದು ಆರೆಸ್ಸೆಸ್ ಭಯಪಟ್ಟಿತು. ಈ ಸಂದರ್ಭದಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯೆಜಿ ಜೋಶಿ ಮಧ್ಯಪ್ರವೇಶಿಸಿದರು ಹಾಗೂ ಮೋದಿ ಬೆಂಬಲಿಗರು ಹಿಂದೆ ಸರಿದರು.
ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವಷ್ಟರಲ್ಲಿ ಭಯ್ಯಿಜಿ ಜೋಶಿ ಮಧ್ಯಪ್ರವೇಶಿಸಿದರೆಂದು ರೆಡ್ಡಿಗೆ ನಿಕಟವರ್ತಿಯಾಗಿರುವ ವಿಎಚ್‌ಪಿ ನಾಯಕರೊಬ್ಬರು ಹೇಳಿದ್ದಾರೆ. ‘‘ಪ್ರವೀಣ್ ಭಾಯ್ ಅವರಿಗೆ ಎಷ್ಟರ ಮಟ್ಟಿಗೆ ಅಭೂತಪೂರ್ವ ಬೆಂಬಲವಿತ್ತೆಂದರೆ, ಕೊಕ್‌ಜೆ ಅವರು ಚುನಾವಣೆಯಲ್ಲಿ ದಯನೀಯವಾಗಿ ಸೋಲಬಹುದಾಗಿತ್ತು. ಹಾಲಿ ನಾಯಕತ್ವವು ವಿಎಚ್‌ಪಿಯಲ್ಲಿನ ಬಹುತೇಕ ಮತದಾರರ ವಿಶ್ವಾಸವನ್ನು ಹೊಂದಿರುವುದು ನಮ್ಮ ಪ್ರತಿಸ್ಪರ್ಗಳಲ್ಲಿ ಭಯವನ್ನು ಮೂಡಿಸಿದೆ. ಈ ಕಾರಣಕ್ಕಾಗಿಯೇ ಅವರು, ಭುವನೇಶ್ವರದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಪಡೆದ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ’’ ಈ ನಾಯಕ ಅಭಿಪ್ರಾಯಿಸಿದ್ದಾರೆ.
1964ರಲ್ಲಿ ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್, ಅಧ್ಯಕ್ಷ ಸ್ಥಾನಕ್ಕಾಗಿ ಎಂದಿಗೂ ಚುನಾವಣೆಯನ್ನು ನಡೆಸಿರಲಿಲ್ಲ ಹಾಗೂ ಆ ಹುದ್ದೆಗೆ ಅವಿರೋಧ ಆಯ್ಕೆಗೆ ಅದು ಪ್ರಾಶಸ್ತ್ಯ ನೀಡಿತ್ತು. ಇದೀಗ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಸಮ್ಮತಿಸಿರುವುದು, ತೊಗಾಡಿಯಾರನ್ನು ಹೇಗಾದರೂ ಮಾಡಿ ಉಚ್ಚಾಟಿಸಬೇಕೆಂಬ ಆರೆಸ್ಸೆಸ್‌ನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ. ಸಂಘಪರಿವಾರದಲ್ಲಿ ಮೋದಿ ಲಾಬಿ ತನ್ನ ಪ್ರಭಾವ ವಿಸ್ತರಿಸುತ್ತಿರುವುದನ್ನು ತೋರಿಸಿಕೊಟ್ಟಿದೆ.
ಕೃಪೆ: scroll.in

Writer - ಧಿರೇಂದ್ರ ಕೆ. ಜಾ

contributor

Editor - ಧಿರೇಂದ್ರ ಕೆ. ಜಾ

contributor

Similar News

ಜಗದಗಲ
ಜಗ ದಗಲ