ಬರುತ್ತಿದೆ, ಅಪರಾಧದ ಮುನ್ಸೂಚನೆ ನೀಡುವ ಸಾಫ್ಟ್‌ವೇರ್!

Update: 2018-04-15 18:35 GMT

ಪಾತಕಿಯೊಬ್ಬ ಅಪರಾಧವೊಂದನ್ನು ಎಸಗುವ ಮುನ್ನವೇ ಪೊಲೀಸರಿಗೆ ಅದನ್ನು ಅರಿಯಲು ಸಾಧ್ಯವೇ?. ಈ ರೀತಿಯ ಅಪರಾಧ ತಡೆಗಟ್ಟುವ ತಂತ್ರಜ್ಞಾನವಿದ್ದಲ್ಲಿ ಜಗತ್ತಿನಲ್ಲಿ ಅಪರಾಧ ಪ್ರಮಾಣವನ್ನು ಗಣನೀಯವಾಗಿ ಇಳಿಸಲು ಸಾಧ್ಯವಿದೆ. ಕೇವಲ ಸೈಂಟಿಫಿಕ್ ಫಿಕ್ಷನ್ ಚಿತ್ರಗಳಲ್ಲಿ ಇದನ್ನು ಕಲ್ಪಿಸಿಕೊಳ್ಳಲು ಸಾಧ.್ಯ ಆದರೆ ಈ ರೀತಿ ಅಪರಾಧದ ಮುನ್ಸೂಚನೆ ನೀಡುವ ತಂತ್ರಜ್ಞಾನವೊಂದು ಸಿದ್ಧವಾಗುತ್ತಿದೆಯೆಂಬುದು ಸುಳ್ಳಲ್ಲ. ನಿಜಕ್ಕೂ ಹೇಳಬೇಕೆಂದರೆ ಭಾರತದಲ್ಲೂ ಈ ತಂತ್ರಜ್ಞಾನ ಪ್ರಾಯೋಗಿಕ ಪರೀಕ್ಷೆಗೆ ಸನ್ನದ್ಧವಾಗುತ್ತಿದೆ.
ಅಪರಾಧದ ಮುನ್ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (ಕ್ರೈಮ್ ಪ್ರೆಡಿಕ್ಟಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್)ಅನ್ನು ಟೆಲ್‌ಅವೀವ್ ಮೂಲದ ಕ್ರೊಟಿಕಾ ಸಾಫ್ಟ್‌ವೇರ್ ಕಂಪೆನಿ ಅಭಿವೃದ್ಧಿಪಡಿಸಿದೆ ಮಿಲಿಟರಿ ದರ್ಜೆಯ ಭದ್ರತಾ ವ್ಯವಸ್ಥೆಯನ್ನು ಆಧರಿಸಿದ ಈ ಕ್ರೊಟಿಕಾ ಸಾಫ್ಟ್‌ವೇರ್ ಪೊಲೀಸ್ ಇಲಾಖೆಗಾಗಿ ರೂಪಿಸಲಾಗಿದೆ. ಈ ಸಾಫ್ಟ್‌ವೇರ್‌ನಿಂದ ಅತ್ಯಾಚಾರ, ದಾಳಿ ಹಾಗೂ ವಂಚನೆಯನ್ನು ತಪ್ಪಿಸಬಹುದಾಗಿದೆಯಂತೆ.
ಭದ್ರತಾ ಕ್ಯಾಮರಾದ ಒಂದು ಭಾಗವಾಗಿ ಈ ಕ್ಯಾಮರಾವನ್ನು ಪೊಲೀಸರು ಅಥವಾ ಇನ್ನಾವುದೇ ಭದ್ರತಾ ಸಿಬ್ಬಂದಿ ಧರಿಸಿದಲ್ಲಿ, ಅದರಲ್ಲಿರುವ ಸಾಫ್ಟ್‌ವೇರ್ ವ್ಯಕ್ತಿಗಳ ಚಲನವಲನಗಳನ್ನು, ಅವರ ವರ್ತನೆಯನ್ನು, ಮುಖಭಾವವನ್ನು ವಿಶ್ಲೇಷಿಸುತ್ತದೆ. ಆ ಮೂಲಕ ಆತ ಅಪರಾಧವೆಸಗುವ ಉದ್ದೇಶ ಹೊಂದಿದ್ದಾನೆಯೇ ಎಂಬುದನ್ನು ನಿರ್ಣಯಿಸಿ, ಮಾಹಿತಿಯನ್ನು ನೀಡುತ್ತದೆ. ವೀಡಿಯೊ ಕ್ಯಾಮರಾಗಳು, ಡ್ರೋಣ್‌ಗಳು ಹಾಗೂ ಉಪಗ್ರಹಗಳ ದತ್ತಾಂಶವನ್ನು ಸಂಯೋಜಿಸುವ ಈ ಸಾಫ್ಟ್‌ವೇರ್ ಅಪರಾಧವೆಸಗುವ ವ್ಯಕ್ತಿ ಹಾಗೂ ಗುಂಪುಗಳ ವರ್ತನೆಯಲ್ಲಿನ ವ್ಯತ್ಯಾಸಗಳನ್ನು ಕೂಡಾ ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ