ಈ ವರ್ಷ ವಾಡಿಕೆಯ ಮುಂಗಾರು ಮಳೆ : ಹವಾಮಾನ ಇಲಾಖೆ

Update: 2018-04-16 14:36 GMT

ಹೊಸದಿಲ್ಲಿ, ಎ.16: ದೇಶದಲ್ಲಿ ಕೃಷಿ ಚಟುವಟಿಕೆಗೆ ಮೂಲಾಧಾರವಾಗಿರುವ ಮುಂಗಾರು ಮಳೆ ಈ ವರ್ಷ (2018)ರಲ್ಲಿ ಮಾಮೂಲಿನಂತೆ (ವಾಡಿಕೆ) ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ಸರಾಸರಿ ಮಟ್ಟದ ಶೇ.97ರಷ್ಟು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಕೆ.ಜೆ.ರಮೇಶ್ ತಿಳಿಸಿದ್ದಾರೆ. ಇದರಿಂದ ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಳೆಯನ್ನೇ ಅವಲಂಬಿಸಿರುವ ರೈತರಲ್ಲಿ ಈ ಬಾರಿ ಉತ್ತಮ ಫಸಲಿನ ನಿರೀಕ್ಷೆ ಮೂಡಿದೆ. ಅಲ್ಲದೆ ಕೃಷಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯುವುದರಿಂದ ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ . ಜೊತೆಗೆ 2019ರ ಮೇ ತಿಂಗಳಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯನ್ನು ಅವಧಿಪೂರ್ವಕ ನಡೆಸಲು ಪ್ರಧಾನಿ ಮೋದಿ ಒಲವು ತೋರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಕಳೆದ 50 ವರ್ಷದ ಸರಾಸರಿಯ ಆಧಾರದಲ್ಲಿ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಮುಂಗಾರು ಮಳೆಯ ಅವಧಿಯಲ್ಲಿ ಶೇ.96ರಿಂದ ಶೇ.104ರ ವರೆಗಿನ ಸರಾಸರಿ ಮಳೆಯನ್ನು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News