ಮ್ಯಾನ್ಮಾರ್: 8,500 ಕೈದಿಗಳಿಗೆ ಕ್ಷಮಾದಾನ

Update: 2018-04-17 17:53 GMT

ಯಾಂಗನ್ (ಮ್ಯಾನ್ಮಾರ್), ಎ. 17: 30ಕ್ಕೂ ಅಧಿಕ ರಾಜಕೀಯ ಕೈದಿಗಳು ಸೇರಿದಂತೆ 8,500ಕ್ಕೂ ಅಧಿಕ ಕೈದಿಗಳಿಗೆ ಮ್ಯಾನ್ಮಾರ್ ಅಧ್ಯಕ್ಷ ವಿನ್ ಮ್ಯಿಂಗ್ ಮಂಗಳವಾರ ಕ್ಷಮಾದಾನ ನೀಡಿದ್ದಾರೆ.

ಮ್ಯಾನ್ಮಾರ್‌ನ ಸಾಂಪ್ರದಾಯಿಕ ಹೊಸ ವರ್ಷದ ಸಂದರ್ಭದಲ್ಲಿ ಕ್ಷಮಾದಾನ ನೀಡಲಾಗಿದೆ. ಕ್ಷಮಾದಾನ ಪಡೆದವರಲ್ಲಿ 51 ವಿದೇಶೀಯರೂ ಇದ್ದಾರೆ.

ಈಗಾಗಲೇ ಶಿಕ್ಷೆಗೆ ಗುರಿಯಾದವರಿಗೆ ಮಾತ್ರ ಕ್ಷಮಾದಾನ ನೀಡಲಾಗಿದೆ. ವಿಚಾರಣಾಧೀನ ಕೈದಿಗಳಿಗೆ ಈ ಕೊಡುಗೆ ಲಭಿಸಿಲ್ಲ.

ರೊಹಿಂಗ್ಯಾ ಮುಸ್ಲಿಮರ ಪರವಾಗಿ ವರದಿ ಮಾಡಿದ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಇಬ್ಬರು ವರದಿಗಾರರಿಗೆ ಕ್ಷಮಾದಾನ ಸಿಕ್ಕಿಲ್ಲ.

ರಹಸ್ಯ ಸರಕಾರಿ ದಾಖಲೆಗಳನ್ನು ಹೊಂದಿದ ಆರೋಪದಲ್ಲಿ ವಾ ಲೋನ್ ಮತ್ತು ಕ್ಯಾವ್ ಸೋ ಓ ಅವರನ್ನು ಅಧಿಕಾರಿಗಳು ತಿಂಗಳ ಹಿಂದೆ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News