ಮಿಗುಯಲ್ ಮರಿಯೊ ಕ್ಯೂಬದ ಮುಂದಿನ ಅಧ್ಯಕ್ಷ

Update: 2018-04-19 14:20 GMT

ಹವಾನ (ಕ್ಯೂಬ), ಎ. 19: ಕ್ಯೂಬದ 57 ವರ್ಷದ ಪ್ರಥಮ ಉಪಾಧ್ಯಕ್ಷ ಮಿಗುಯಲ್ ಮರಿಯೊ ಡಯಾಝ್-ಕಾನಲ್‌ರನ್ನು ಮುಂದಿನ ಅಧ್ಯಕ್ಷರಾಗಿ ಆರಿಸಲಾಗಿದೆ.

ಅವರು ಅಧ್ಯಕ್ಷ ರವುಲ್ ಕ್ಯಾಸ್ಟ್ರೊ ಸ್ಥಾನದಲ್ಲಿ ಬರಲಿದ್ದಾರೆ. ಕ್ಯೂಬದಲ್ಲಿ ಕಮ್ಯುನಿಸ್ಟ್ ಆಡಳಿತ ಬಂದ ನಂತರದ 60 ವರ್ಷಗಳಲ್ಲಿ ಕ್ಯಾಸ್ಟ್ರೊ ಕುಟುಂಬದ ಹೊರಗೆ ಅಧಿಕಾರ ಹೋಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಅದೇ ವೇಳೆ, 86 ವರ್ಷದ ರವುಲ್ ಕ್ಯಾಸ್ಟ್ರೊ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿರುತ್ತಾರೆ. ಸಂವಿಧಾನವು ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರನ್ನು ‘‘ಸಮಾಜ ಮತ್ತು ದೇಶದ ಅತ್ಯುನ್ನತ ಮಾರ್ಗದರ್ಶಕ ಶಕ್ತಿ’’ ಎಂಬುದಾಗಿ ಬಣ್ಣಿಸುತ್ತದೆ.

ಹಾಗಾಗಿ, ಸದ್ಯಕ್ಕೆ ರವುಲ್ ಕ್ಯಾಸ್ಟ್ರೊ ಕ್ಯೂಬದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿಯೇ ಮುಂದುವರಿಯುತ್ತಾರೆ.

ಈ ಬೆಳವಣಿಗೆಯ ಬಳಿಕ ಕ್ಯೂಬದ ಜನರು ಕ್ಯಾಸ್ಟ್ರೊ ಕುಟುಂಬದ ಹೊರಗಿನ ವ್ಯಕ್ತಿಗಳ ಆಡಳಿತದ ವೈಖರಿಯನ್ನು ನೋಡಲಿದ್ದಾರೆ. 60 ವರ್ಷಗಳ ಏಕಾಧಿಪತ್ಯದ ಅವಧಿಯಲ್ಲಿ ಕ್ಯೂಬದ ಜನರು ಮೊದಲ 50 ವರ್ಷಗಳ ಕಾಲ ಫಿಡೆಲ್ ಕ್ಯಾಸ್ಟ್ರೊ ಮತ್ತು ಕೊನೆಯ 10 ವರ್ಷಗಳಲ್ಲಿ ಅವರ ತಮ್ಮ ರವುಲ್ ಕ್ಯಾಸ್ಟ್ರೊ ಆಡಳಿತವನ್ನು ನೋಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News