ಭಾರತ ಈಗ ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕತೆ: ಐಎಂಎಫ್

Update: 2018-04-19 17:15 GMT

ವಾಶಿಂಗ್ಟನ್, ಎ. 19: ಭಾರತದ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ವು 2017ರಲ್ಲಿ 2.6 ಟ್ರಿಲಿಯನ್ ಡಾಲರ್ (171 ಲಕ್ಷ ಕೋಟಿ ಡಾಲರ್) ಆಗಿತ್ತು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ 2018 ಎಪ್ರಿಲ್‌ಗಾಗಿನ ‘ಜಾಗತಿಕ ಆರ್ಥಿಕ ಚಿತ್ರಣ’ ಹೇಳಿದೆ.

ಈಗ ಭಾರತವು ಫ್ರಾನ್ಸನ್ನು ಹಿಂದಿಕ್ಕಿ ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಭಾರತಕ್ಕಿಂತ ಮುಂದಿರುವ ಐದು ದೇಶಗಳೆಂದರೆ- ಅಮೆರಿಕ, ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್.

ಕರೆನ್ಸಿ ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯ ದುಷ್ಪರಿಣಾಮಗಳಿಂದ ಭಾರತ ಅಂತಿಮವಾಗಿ ಹೊರಬಂದಿದೆ ಎಂಬುದಾಗಿ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಎರಡೂ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಹೇಳಿವೆ. ಆ ಎರಡು ಕ್ರಮಗಳು ಎಷ್ಟೇ ಉಪದ್ರವಕಾರಿಯಾದರೂ ಅವುಗಳನ್ನು ಜಾರಿಗೊಳಿಸಲೇ ಬೇಕಾಗಿತ್ತು ಎಂದು ಅವು ಹೇಳಿವೆ.

ಭಾರತವು ಪ್ರಗತಿ ಸಾಧಿಸಿರುವುದನ್ನು ಐಎಂಎಫ್ ಒಪ್ಪಿಕೊಂಡಿದೆಯಾದರೂ, 2018ರ ಪ್ರಗತಿ ದರ ನಿರೀಕ್ಷೆಯನ್ನು 7.4ಶೇಕಡ ಹಾಗೂ 2019ರ ದರವನ್ನು 7.8 ಶೇಕಡದಲ್ಲೇ ನಿಗದಿಪಡಿಸಿದೆ. ಇದು 2017ರಲ್ಲಿದ್ದ 6.7 ಶೇಕಡಕ್ಕಿಂತ ಅಧಿಕವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News