ಚೀನಾ ಸೇನಾಭ್ಯಾಸದ ಹಿಂದೆ ತೈವಾನನ್ನು ಬೆದರಿಸುವ ಉದ್ದೇಶ: ತೈವಾನ್ ಆರೋಪ

Update: 2018-04-19 17:24 GMT

 ಬೀಜಿಂಗ್, ಎ. 19: ತೈವಾನ್ ಜಲಸಂಧಿಯಲ್ಲಿ ಇತ್ತೀಚೆಗೆ ಚೀನಾ ನಡೆಸಿರುವ ಸೇನಾ ಅಭ್ಯಾಸವು ತೈವಾನನ್ನು ಬೆದರಿಸುವ ಉದ್ದೇಶ ಹೊಂದಿತ್ತು ಹಾಗೂ ಅದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ತೈವಾನ್ ಸರಕಾರ ಗುರುವಾರ ಹೇಳಿದೆ.

ಚೀನಾವು ತೈವಾನ್ ಮೇಲೆ ಒತ್ತಡ ಹೇರಲು ಹಾಗೂ ಅದಕ್ಕೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ ಹಾಗೂ ಉಭಯ ದೇಶಗಳ ನಡುವಿನ ಹಾಗೂ ಪ್ರಾದೇಶಿಕ ಉದ್ವಿಗ್ನತೆ ವೃದ್ಧಿಸುವುದನ್ನು ಅದು ಎದುರು ನೋಡುತ್ತಿದೆ ಎಂದು ಮೇನ್‌ಲ್ಯಾಂಡ್ ಅಫೇರ್ಸ್ ಕೌನ್ಸಿಲ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

‘‘ಈ ವಿಷಯದಲ್ಲಿ ತೈವಾನ್ ಜನರು ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದಾರೆ ಹಾಗೂ ಅವರು ಚೀನಾದ ಈ ಕುತಂತ್ರಗಳನ್ನು ಸ್ವೀಕರಿಸುವುದಿಲ್ಲ. ದೇಶದ ಸಾರ್ವಭೌಮತೆ ಮತ್ತು ಘನತೆಯನ್ನು ರಕ್ಷಿಸಲು ನಾವು ಕಟಿಬದ್ಧರಾಗಿದ್ದೇವೆ ಹಾಗೂ ಯಾವುದೇ ಸೇನಾ ಬೆದರಿಕೆಗಳು ಅಥವಾ ಓಲೈಕೆಗಳಿಗೆ ನಾವು ಮಣಿಯುವುದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News