ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಪದಚ್ಯುತಿಗೆ ವಿಪಕ್ಷಗಳಿಂದ ವಾಗ್ದಂಡನೆ ನಿಲುವಳಿ ಸಲ್ಲಿಕೆ
Update: 2018-04-20 15:02 IST
ಹೊಸದಿಲ್ಲಿ, ಎ.20: ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಪದಚ್ಯುತಿಗೆ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಝಾದ್ ನೇತೃತ್ವದಲ್ಲಿ ವಾಗ್ದಂಡನೆ ನಿಲುವಳಿ ಮಂಡಿಸಲು ವಿಪಕ್ಷಗಳು ಸಜ್ಜಾಗಿವೆ. ಶುಕ್ರವಾರ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ವಿಪಕ್ಷ ನಾಯಕರು ವಾಗ್ದಂಡನೆ ನಿಲುವಳಿಯನ್ನು ಸಲ್ಲಿಸಿದ್ದಾರೆ.
ವಾಗ್ದಂಡನೆ ನಿಲುವಳಿಗೆ 60 ವಿಪಕ್ಷ ನಾಯಕರು ಸಹಿ ಹಾಕಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಹಾಗೂ ಡಿಎಂಕೆ ಸಂಸದರು ಸಹಿ ಹಾಕುವುದರಿಂದ ದೂರ ಉಳಿದಿದ್ದಾರೆ.
ನ್ಯಾ.ಬಿ.ಎಚ್. ಲೋಯಾ ನಿಗೂಢ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿ ಸಲ್ಲಿಸಿರುವ ಐದು ಅರ್ಜಿಗಳನ್ನು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಗುರುವಾರ ತಿರಸ್ಕರಿಸಿತ್ತು. ಆ ಬಳಿಕ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಿಜೆಐ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿವೆ.