ಬಿಜೆಪಿ ತೊರೆದ ಯಶ್ ವಂತ್ ಸಿನ್ಹಾ

Update: 2018-04-21 08:24 GMT

ಹೊಸದಿಲ್ಲಿ, ಎ.21: ಮಾಜಿ ಕೇಂದ್ರ ಸಚಿವ, ಹಿರಿಯ ಬಿಜೆಪಿ ನಾಯಕ ಯಶ್ ವಂತ್ ಸಿನ್ಹಾ ಬಿಜೆಪಿಯನ್ನು ತೊರೆಯುವುದಾಗಿ ಇಂದು ಘೋಷಿಸಿದ್ದಾರೆ.

ಯಶ್ ವಂತ್ ಸಿನ್ಹಾ ಅವರ ರಾಷ್ಟ್ರ ಮಂಚ್ ನ ಸಭೆಯೊಂದರಲ್ಲಿ ಅವರು ಈ ಘೋಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಆರ್ ಜೆಡಿಯ ಹಲವು ನಾಯಕರು ಸೇರಿದಂತೆ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಭಾಗವಹಿಸಿದ್ದರು.

"ಎಲ್ಲಾ ರಾಜಕೀಯ ಪಕ್ಷಗಳಿಂದ ನಾನು ಇಂದು ರಾಜಕೀಯ 'ಸನ್ಯಾಸತ್ವ' ಸ್ವೀಕರಿಸುತ್ತಿದ್ದೇನೆ. ಇಂದು ಬಿಜೆಪಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದೇನೆ. ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದೆ" ಎಂದವರು ಇದೇ ಸಂದರ್ಭ ಹೇಳಿದರು. 

"ನಾನು ಎನ್ ಡಿಎ ಸರಕಾರದಲ್ಲೇ ಇದ್ದೆ. ಅಟಲ್ ಬಿಹಾರಿ ವಾಜಪೇಯಿ ಸರಕಾರವಿದ್ದಾಗ ಸಂಸತ್ತು ನಡೆಯಲೇಬೇಕು ಎಂದು ಹೇಳಲಾಗುತ್ತಿತ್ತು. ಆದರೆ ಇಂದಿನ ಪ್ರಧಾನಿ ಬಿಕ್ಕಟ್ಟನ್ನು ಪರಿಹರಿಸಲು ವಿಪಕ್ಷಗಳೊಂದಿಗೆ ಮಾತುಕತೆಗಾದರೂ ಪ್ರಯತ್ನಿಸಿದ್ದಾರೆಯೇ?, ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವುದಿಲ್ಲ ಎಂಬ ಕಾರಣಕ್ಕೆ ಸಂಸತ್ ನಡೆಯದ ಬಗ್ಗೆ ಸರಕಾರಕ್ಕೇ ಸಂತೋಷವಿದೆ" ಎಂದು ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News