ಭಾರತ ಮೂಲದ ಪಾಠಕ್‌ಗೆ ಯುವ ಅರ್ಥಶಾಸ್ತ್ರ ಪ್ರಶಸ್ತಿ

Update: 2018-04-21 17:33 GMT

ವಾಶಿಂಗ್ಟನ್, ಎ. 21: ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರೊಫೆಸರ್ ಭಾರತ ಮೂಲದ ಪರಾಗ್ ಪಾಠಕ್‌ರಿಗೆ ಯುವ ಅರ್ಥಶಾಸ್ತ್ರಜ್ಞರಿಗೆ ನೀಡಲಾಗುವ ‘ಜಾನ್ ಬೇಟ್ಸ್ ಕ್ಲಾರ್ಕ್’ ಪ್ರಶಸ್ತಿ ನೀಡಲಾಗಿದೆ.

 ಮಾರುಕಟ್ಟೆ ವಿನ್ಯಾಸ ಮತ್ತು ಶಿಕ್ಷಣ ನೀತಿ ಕುರಿತ ಕೆಲಸಕ್ಕಾಗಿ 37 ವರ್ಷದ ಪಾಠಕ್‌ಗೆ ಈ ಗೌರವ ನೀಡಲಾಗಿದೆ ಎಂದು ಅಮೆರಿಕದ ಟೆನೆಸಿಯಲ್ಲಿರುವ ಅಮೆರಿಕನ್ ಎಕನಾಮಿಕ್ ಅಸೋಸಿಯೇಶನ್ ಶುಕ್ರವಾರ ತಿಳಿಸಿದೆ.

ಎರಡು ವರ್ಷಗಳಿಗೊಮ್ಮೆ ನೀಡುವ ಪ್ರಶಸ್ತಿಯಾಗಿ 1947ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು. 40 ವರ್ಷಕ್ಕಿಂತ ಕೆಳಗಿನ, ಅಮೆರಿಕದಲ್ಲಿ ಕೆಲಸ ಮಾಡುವ ಹಾಗೂ ಆರ್ಥಿಕ ಚಿಂತನೆ ಮತ್ತು ಜ್ಞಾನಕ್ಕೆ ಮಹತ್ವದ ದೇಣಿಗೆ ನೀಡಿರುವ ಅರ್ಥಶಾಸ್ತ್ರಜ್ಞರೊಬ್ಬರಿಗೆ ಈಗ ಪ್ರತಿ ವರ್ಷ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News