ವಿಮಾನದ ಇಂಜಿನ್ ಸ್ಫೋಟ: ಪ್ರಯಾಣಿಕರಿಗೆ ಸಿಗಲಿರುವ ಪರಿಹಾರವೇನು ಗೊತ್ತಾ?

Update: 2018-04-21 17:49 GMT

ವಾಶಿಂಗ್ಟನ್, ಎ. 21: ಈ ವಾರ ಹಾರಾಟದ ವೇಳೆ ಇಂಜಿನ್ ಸ್ಫೋಟಗೊಂಡ ವಿಮಾನದ ಪ್ರಯಾಣಿಕರಿಗೆ ಸೌತ್‌ವೆಸ್ಟ್ ಏರ್‌ಲೈನ್ಸ್ ತಲಾ 5,000 ಡಾಲರ್ (ಸುಮಾರು 3.31 ಲಕ್ಷ ರೂಪಾಯಿ) ಪರಿಹಾರ ನೀಡಲಿದೆ. ಜೊತೆಗೆ ಈ ಪ್ರಯಾಣಿಕರಿಗೆ 1,000 ಡಾಲರ್ (ಸುಮಾರು 66,000 ರೂಪಾಯಿ) ಮೌಲ್ಯದ ಪ್ರಯಾಣ ವೌಚರ್‌ಗಳನ್ನೂ ನೀಡುತ್ತಿದೆ.

ವಿಮಾನದ ಇಂಜಿನ್ ಸ್ಫೋಟಗೊಂಡ ಘಟನೆಯಲ್ಲಿ ಓರ್ವ ಮಹಿಳಾ ಪ್ರಯಾಣಿಕ ಮೃತಪಟ್ಟಿದ್ದಾರೆ.

ಮಂಗಳವಾರ ನ್ಯೂಯಾರ್ಕ್‌ನಿಂದ ಡಲ್ಲಾಸ್‌ಗೆ ಹಾರುತ್ತಿದ್ದ ವಿಮಾನದಲ್ಲಿ ಇಂಜಿನ್ ಸಿಡಿದು ಅದರ ಚೂರುಗಳು ಕಿಟಕಿಯ ಗಾಜಿಗೆ ಬಡಿಯಿತು. ಆಗ ಕಿಟಿಕಿ ಗಾಜು ಮುರಿದು ದೊಡ್ಡ ತೂತು ಏರ್ಪಟ್ಟಿತು. ಕಿಟಕಿಯ ಬದಿಯಲ್ಲಿ ಕುಳಿತಿದ್ದ ಮಹಿಳೆಯ ಅರ್ಧ ದೇಹ ಹೊರಗೆ ತಳ್ಳಲ್ಪಟ್ಟಿತು. ಉಳಿದ ಪ್ರಯಾಣಿಕರು ಅವರನ್ನು ಒಳಗೆಳೆದುಕೊಂಡರು. ಆದಾಗ್ಯೂ, ಗಂಭೀರವಾಗಿ ಗಾಯಗೊಂಡ ಮಹಿಳೆ ಬಳಿಕ ವಿಮಾನ ನಿಲ್ದಾಣದಲ್ಲಿ ಕೊನೆಯುಸಿರೆಳೆದರು.

ವಿಮಾನವನ್ನು ಪೈಲಟ್‌ಗಳು ಫಿಲಡೆಲ್ಫಿಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಸುರಕ್ಷಿತವಾಗಿ ಇಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News