ಬಂದೂಕು ನಿಯಂತ್ರಣಕ್ಕಾಗಿ ತರಗತಿ ಬಹಿಷ್ಕಾರ

Update: 2018-04-21 17:55 GMT

ಲಿಟಲ್‌ಟನ್ (ಅಮೆರಿಕ), ಎ. 21: ಕೊಲಂಬೈನ್ ಹೈಸ್ಕೂಲ್‌ನಲ್ಲಿ ನಡೆದ ಹತ್ಯಾಕಾಂಡದ 19ನೆ ವಾರ್ಷಿಕ ದಿನದ ಸಂದರ್ಭದಲ್ಲಿ ಅಮೆರಿಕದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿದರು ಹಾಗೂ ಕಠಿಣ ಬಂದೂಕು ನಿರ್ಬಂಧಗಳನ್ನು ಜಾರಿಗೆ ತರುವಂತೆ ರಾಜಕೀಯ ನಾಯಕರನ್ನು ಒತ್ತಾಯಿಸಿ ಮೆರವಣಿಗೆ ನಡೆಸಿದರು.

2,600ಕ್ಕೂ ಅಧಿಕ ಶಾಲೆಗಳು ಮತ್ತು ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಕೊಲಂಬೈನ್‌ನಲ್ಲಿ ಮೃತಪಟ್ಟವರಿಗಾಗಿ 13 ಸೆಕೆಂಡ್‌ಗಳ ಮೌನ ಆಚರಿಸಿದರು.

1999 ಎಪ್ರಿಲ್ 20ರಂದು ಕೊಲಂಬೈನ್ ಹೈಸ್ಕೂಲ್‌ನ ಇಬ್ಬರು ಹಿರಿಯ ವಿದ್ಯಾರ್ಥಿಗಳು ತಮ್ಮ 12 ಸಹಪಾಠಿಗಳು ಮತ್ತು ಓರ್ವ ಶಿಕ್ಷಕರನ್ನು ಕೊಂದರು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News