ವಾಘಾ ಗಡಿಯಲ್ಲಿ ಪಾಕ್ ಕ್ರಿಕೆಟಿಗ ಹಸನ್ ಅಲಿಯಿಂದ ಅನುಚಿತ ವರ್ತನೆ!

Update: 2018-04-22 08:59 GMT

ಶ್ರೀನಗರ, ಎ.22: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹಸನ್ ಅಲಿ ಅವರು ವಾಘಾ ಗಡಿಯಲ್ಲಿ ಧ್ವಜ ಅವರೋಹಣ ಸಮಾರಂಭಕ್ಕೆ ಆಗಮಿಸಿ ಪಾಕ್ ಪರ ಘೋಷಣೆ ಕೂಗಿ  ತೊಡೆ ತಟ್ಟಿದ ಘಟನೆ ಬೆಳಕಿಗೆ ಬಂದಿದೆ.

ಧ್ವಜ ಅವರೋಹಣ ಸಮಾರಂಭದಲ್ಲಿ  ಭಾಗವಹಿಸಿದ್ದ ಹಸನ್  ಅಲಿ ಕುಳಿತಲ್ಲಿಂದ ಎದ್ದು ಬಂದು ಸೈನಿಕರನ್ನು ಅನುಕರಿಸಿ, ಮಂಗನಾಟ ಪ್ರದರ್ಶಿಸಿದ್ದಾರೆ. ಹಸನ್ ಅಲಿಗೆ  ಇನ್ನೊಬ್ಬ ವ್ಯಕ್ತಿ ಸಾಥ್ ನೀಡಿ ಹಾಸ್ಯ ಮಾಡಿದ್ದಾನೆ. ಆದರೆ ಆತ ಯಾರೆಂದು ಗೊತ್ತಿಲ್ಲ.

 ಹಸನ್ ಅಲಿ  ಕಪಿಚೇಷ್ಟೆ  ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಆತನ  ವಿರುದ್ಧ ಟೀಕೆ ವ್ಯಕ್ತವಾಗಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News