ಅಮೆರಿಕದಲ್ಲಿ ಮತ್ತೆ ಶೂಟೌಟ್: ಮೂವರ ಹತ್ಯೆ

Update: 2018-04-22 17:57 GMT

ವಾಶಿಂಗ್ಟನ್,ಎ.22: ನಾಗರಿಕರು ಬಂದೂಕುಗಳನ್ನು ಹೊಂದುವುದಕ್ಕೆ ನಿಯಂತ್ರಣ ವಿಧಿಸಬೇಕೆಂದು ಅಮೆರಿಕದಾದ್ಯಂತ ತೀವ್ರ ಹೋರಾಟ ಮುಂದುವರಿದಿರುವಂತೆಯೇ, ಟೆನ್ನೆಸ್ ಪ್ರಾಂತದ ಉಪಹಾರಗೃಹವೊಂದರಲ್ಲಿ ರವಿವಾರ ಮುಂಜಾನೆ ನಗ್ನ ಬಂದೂಕುಧಾರಿಯೊಬ್ಬಾತ ಮನಬಂದಂತೆ ಗುಂಡುಹಾರಿಸಿ, ಮೂವರನ್ನು ಹತ್ಯೆಗೈದಿದ್ದಾನೆ ಹಾಗೂ ಇತರ ಕನಿಷ್ಠ ನಾಲ್ವರನ್ನು ಗಾಯಗೊಳಿಸಿದ್ದಾನೆ.

ಟೆನ್ನೆಸ್ ಪ್ರಾಂತದ ಪಟ್ಟಣವಾದ ನ್ಯಾಶ್‌ವೆಲೆಯ ಹೊರವಲಯದಲ್ಲಿನ ರೆಸ್ಟಾರೆಂಟ್‌ನಲ್ಲಿ ರವಿವಾರ ಮುಂಜಾನೆ 3:25ರ ವೇಳೆ ಶೂಟೌಟ್ ನಡೆದಿರುವುದಾಗಿ ಮೆಟ್ರೊಪಾಲಿಟನ್ ನ್ಯಾಶ್‌ವಿಲೆ ಪೊಲೀಸ್ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News