ಪಾಕ್‌ಗೆ ತೆರಳಿದ್ದ ಭಾರತೀಯ ಯುವಕ ನಿಗೂಢ ನಾಪತ್ತೆ

Update: 2018-04-22 18:09 GMT

ಲಾಹೋರ್,ಎ.22: ಬೈಶಾಖಿ ಹಬ್ಬದ ಆಚರಣೆಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ 24 ವರ್ಷದ ಭಾರತೀಯ ಯುವಕನೊಬ್ಬ ನಾಪತ್ತೆಯಾಗಿದ್ದಾನೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಪಂಜಾಬ್‌ನ ಅಮೃತಸರದ ನಿವಾಸಿಯಾದ ಅಮರ್‌ಜಿತ್ ಸಿಂಗ್ ಎಪ್ರಿಲ್ 12ರಂದು ಬೈಶಾಖಿ ಹಬ್ಬ ಆಚರಿಸಲು ಇತರ ಸಿಖ್ ಯಾತ್ರಿಕರೊಂದಿಗೆ ಪಾಕಿಸ್ತಾನಕ್ಕೆ ಆಗಮಿಸಿದ್ದರು. ಆದರೆ ಅಮರ್‌ಜಿತ್ ಸಿಂಗ್ ಜೊತೆ ಆಗಮಿಸಿದ್ದ ಯಾತ್ರಿಕರ ತಂಡವು ಭಾರತಕ್ಕೆ ಹಿಂತಿರುಗುವ ವೇಳೆ, ಆತ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತು.

 ಇತರ ಯಾತ್ರಿಕರಂತೆ ಅಮರ್‌ಜಿತ್ ಸಿಂಗ್‌ನ ಪಾಸ್‌ಪೋರ್ಟ್ ಸ್ಥಳಾಂತರಿತ ಆಸ್ತಿ ಟ್ರಸ್ಟ್ ಮಂಡಳಿ(ಇಟಿಪಿಬಿ) ಅಧಿಕಾರಿಗಳ ಜೊತೆಗಿತ್ತು. ಆದರೆ ನಿಗದಿತ ಸಮಯದಲ್ಲಿ ಆತ ಪಾಸ್‌ಪೋರ್ಟ್‌ನ್ನು ಮರಳಿ ಪಡೆದುಕೊಳ್ಳದ ಕಾರಣ ಅವರು ಕೂಡಲೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಭಾರತೀಯ ಯುವಕ ಅಮರ್‌ಜಿತ್‌ಸಿಂಗ್ ಲಾಹೋರ್‌ನಿಂದ ಸಿಖ್ಖರ ಪ್ರಮುಖ ಯಾತ್ರಾಸ್ಥಳ ನಾಕಾನಾ ಸಾಹೀಬ್‌ಗೆ ಪ್ರಯಾಣಿಸುತ್ತಿದ್ದಾಗ ಕಣ್ಮರೆಯಾಗಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಆತನ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News