ನಗದು ಕೊರತೆ ಎಂಬ ಬಿಡಿಸಲಾಗದ ಒಗಟು

Update: 2018-04-23 06:00 GMT

2 ಸಾವಿರ ರೂ. ನೋಟುಗಳನ್ನು ಕಾನೂನುಬಾಹಿರ ಉದ್ದೇಶಗಳಿಗೆ ಅಥವಾ ಕಪ್ಪುಹಣದ ವ್ಯವಹಾರಗಳಿಗೆ ಬಳಸುತ್ತಿರುವುದೇ ನೋಟುಗಳ ಅಭಾವಕ್ಕೆ ಕಾರಣವಾಗಿರುವ ಸಾಧ್ಯತೆಗಳ ಬಗ್ಗೆಯೂ ಸರಕಾರ ತನಿಖೆ ನಡೆಸಬೇಕಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆದಾಯದ ವೇಗದಲ್ಲಿ ಇಳಿಕೆ, ನಗದು ಪೂರೈಕೆಯ ಕೊರತೆ ಹಾಗೂ ದಿಢೀರ್ ಬೇಡಿಕೆ ಹಾಗೂ ಕಳಪೆರೀತಿಯಲ್ಲಿ ನಗದಿನ ನಿರ್ವಹಣೆಯು ದೇಶದ ವಿವಿಧೆಡೆ ನಗದಿನ ಅಭಾವವನ್ನು ಸೃಷ್ಟಿಸಿದೆ ಎನ್ನಬಹುದಾಗಿದೆ.

ಕಳೆದ ಕೆಲವು ವಾರಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಗದು ಹಣದ ಕೊರತೆ ಯಾಕೆ ಉಂಟಾಗಿದೆಯೆಂಬ ಬಗ್ಗೆ ಮೂರು ವಿಸ್ತೃತ ಸಿದ್ಧಾಂತಗಳಿವೆ.
 ನಿಜಕ್ಕೂ ನಗದು ಅಥವಾ ಕರೆನ್ಸಿಯ ಕೊರತೆಯಾಗಿದೆಯೇ. ಒಂದು ವೇಳೆ ಅದು ಹೌದಾದಲ್ಲಿ, ಈ ಕೊರತೆಯ ತೀವ್ರತೆ ಎಷ್ಟು? ಎಂಬ ಬಗ್ಗೆ ನರೇಂದ್ರ ಮೋದಿ ಸರಕಾರವಾಗಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಗಲಿ ಹೆಚ್ಚು ಮಾತನಾ ಡುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಚಲಾವಣೆಯ ಲ್ಲಿರುವ ಕರೆನ್ಸಿಯ ಪ್ರಮಾಣವು, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆಗೆ ಅನುಗುಣವಾಗಿಲ್ಲವೆಂಬುದು ಇಲ್ಲಿ ಸ್ಪಷ್ಟವಾಗಿದೆ.
2012-2014 ಹಾಗೂ 2014-2016ರ ಅವಧಿಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ (ಸಿಐಸಿ)ಪ್ರಮಾಣದಲ್ಲಿ 28 ಶೇಕಡಕ್ಕಿಂತಲೂ ಅಧಿಕ ಏರಿಕೆಯಾಗಿದ್ದರೆ, ಸಾಮಾನ್ಯ ಜಿಡಿಪಿ ಬೆಳವಣಿಗೆಯಲ್ಲಿ ಶೇ.22.5ರಷ್ಟು ಏರಿಕೆಯಾಗಿದೆ. 2017-2018ರ ಹಣಕಾಸು ವರ್ಷದ ನಡುವೆ ಸಿಐಸಿಯಲ್ಲಿ ಶೇ.10ಕ್ಕಿಂತ ತುಸು ಕಡಿಮೆ ಏರಿಕೆಯಾಗಿದೆ. ಈ ವ್ಯತ್ಯಾಸಕ್ಕೆ ಬಹುತೇಕವಾಗಿ ನಗದು ಅಮಾನ್ಯತೆ ಕಾರಣವಾಗಿದೆ. ನಗದು ಅಮಾನ್ಯದಿಂದಾಗಿ ಬ್ಯಾಂಕ್ ಠೇವಣಿ ಸಂಗ್ರಹದಲ್ಲಿ ಹಾಗೂ ಡಿಜಿಟಲ್ ವ್ಯವಹಾರಗಳಲ್ಲಿ ಅಧಿಕ ಏರಿಕೆಯಾಗಿದೆ.
ಈಗ ನಮ್ಮ ಮುಂದಿರುವ ನೈಜ ಪ್ರಶ್ನೆಯೇನೆಂದರೆ, ಈ ಕರೆನ್ಸಿಯ ಕೊರತೆಯು ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಗಂಭೀರ ಪರಿಣಾಮ ಬೀರಲಿದೆಯೆಂಬುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಉಪ ಗವರ್ನರ್ ಆರ್.ಗಾಂಧಿ ಅವರು ಭಾರತವು 23 ಲಕ್ಷ ಕೋಟಿ ರೂ.ಕರೆನ್ಸಿ ಚಲಾವಣೆ ಯನ್ನು ಹೊಂದಿರಬೇಕೆಂದು ಅಭಿಪ್ರಾಯಿಸಿದ್ದಾರೆ. (ಪ್ರಸ್ತುತ ಭಾರತದ ಚಲಾವಣೆಯಲ್ಲಿರುವ ಕರೆನ್ಸಿಯ ಪ್ರಮಾ ಣವು 18 ಲಕ್ಷ ಕೋಟಿ ರೂ.ಗಳಾಗಿವೆ). ಭಾರತೀಯ ಸ್ಟೇಟ್‌ಬ್ಯಾಂಕ್‌ನ ಮಾಜಿ ಆರ್ಥಿಕ ತಜ್ಞೆ ಸೌಮ್ಯಾ ಕಾಂತಿ ಘೋಷ್ ಸೇರಿದಂತೆ ಇನ್ನು ಕೆಲವರು, ಸಾರ್ವಜನಿಕರಲ್ಲಿರುವ ಕರೆನ್ಸಿ ಹಣದ ಪ್ರಮಾಣವು 2018ರ ಮಾರ್ಚ್‌ನೊಳಗೆ 19.4ರಿಂದ 20 ಲಕ್ಷ ಕೋಟಿ ರೂ.ಗಳಷ್ಟು ಇರಬೇಕೆಂದು ಪ್ರತಿಪಾದಿಸಿದ್ದಾರೆ. ಈ ಅಂತರವು ಹೆಚ್ಚುಕಮ್ಮಿ 1.5 ಲಕ್ಷ ಕೋಟಿ ರೂ.ಗಳಿಂದ 1.9ಲಕ್ಷ ಕೋಟಿ ರೂ.ನಷ್ಟು ಇರಬೇಕೆಂದು ಅವರು ಹೇಳುತ್ತಾರೆ.
ಆದರೆ ಡಿಜಿಟಲ್ ವಹಿವಾಟುಗಳು ಹಾಗೂ ಆರ್ಥಿಕ ಉಳಿತಾಯ ಯೋಜನೆಗಳನ್ನು ಉತ್ತೇಜಿಸುವ ಮೂಲಕ ನಗದು ಕೊರತೆಯನ್ನು ನೀಗಿಸಬಹುದಾಗಿದೆ. ವಾಸ್ತವಿಕವಾಗಿ ಭಾರತದಲ್ಲಿ ಕೊರತೆಯಿರುವ ಕರೆನ್ಸಿಗಳ ವೌಲ್ಯ 70 ಸಾವಿರ ಕೋಟಿ ರೂ.ಗಳೆಂದು ಘೋಷ್ ಬುಧವಾರ ಹೇಳಿದ್ದಾರೆ.
ವಿತ್ತ ಸಚಿವಾಲಯದ ಹಿರಿಯ ಅಧಿಕಾರಿ ಸುಭಾಶ್ಚಂದ್ರ ಗಾರ್ಗ್ ಇತ್ತೀಚೆಗೆ ನೀಡಿದ ಹೇಳಿಕೆಗೆ ಈ ಅಂಕಿ (70 ಸಾವಿರ ಕೋಟಿ ರೂ.) ಯು ತಾಳೆಯಾಗುತ್ತದೆ. ಆರ್‌ಬಿಐ ದಿನಕ್ಕೆ 2500 ಕೋಟಿ ರೂ. ವೌಲ್ಯದ 500 ರೂ. ಮುಖಬೆಲೆಯ ನೋಟುಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಹೀಗಾಗಿ ಒಂದು ತಿಂಗಳೊಳಗೆ ದೇಶದಲ್ಲಿ ಹಣದ ಪೂರೈಕೆಯು 70 ಸಾವಿರ ಕೋಟಿ ರೂ.ಗಳಿಂದ 75 ಸಾವಿರ ಕೋಟಿ ರೂ.ಗಳಾಗಲಿದೆಯೆಂದು ಗಾರ್ಗ್ ಹೇಳಿದ್ದಾರೆ.
ನಗದು ಪೂರೈಕೆ ಕಡಿಮೆಯಾದಲ್ಲಿ, ಬೇಡಿಕೆಯಲ್ಲಿ ಏರಿಕೆಯಾಗಿ, ಅಂತಿಮವಾಗಿ ನಗದಿನ ಅಭಾವಕ್ಕೆ ಕಾರಣವಾಗುತ್ತದೆ ಎಂದವರು ಅಭಿಪ್ರಾಯಿಸುತ್ತಾರೆ.
 2 ಸಾವಿರ ರೂ. ಮುಖಬೆಲೆಯ ನೋಟುಗಳ ದಾಸ್ತಾನು ಮಾಡಲಾಗುತ್ತಿದೆಯೇ?:
ನೋಟಿನ ಅಭಾವಕ್ಕೆ ನೀಡಲಾದ ಕೊನೆಯ ವಿವರಣೆಯು, ಈ ಮೊದಲು ವಿವರಿಸಲಾದ ಉಳಿದ ಎರಡು ವಿವರಣೆಗಳಿಗಿಂತಲೂ ಕಳವಳಕರವಾದುದಾಗಿದೆ. ಅಧಿಕ ಮುಖಬೆಲೆಯ ಅದರಲ್ಲೂ ವಿಶೇಷವಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜನರು ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದಾರೆ ಹಾಗೂ ಅದು ಭಾರತದ ಆರ್ಥಿಕತೆಯಲ್ಲಿ ಸಮರ್ಪಕವಾಗಿ ಚಲಾವಣೆಯಾಗುತ್ತಿಲ್ಲವೆಂದು ಅಜ್ಞಾತ ಸರಕಾರಿ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. 2 ಸಾವಿರ ರೂ. ಮುಖಬೆಲೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳುತ್ತಿಲ್ಲವೆಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ಚಂದ್ರ ಗಾರ್ಗ್ ಸುಳಿವು ನೀಡಿದ್ದಾರೆ. ‘‘ದಾಸ್ತಾನು ಮಾಡಲು ಈ ನೋಟು ಅತ್ಯಂತ ಯೋಗ್ಯವಾದುದಾಗಿದೆಯೆಂದು ಹೇಳುವ ಮೂಲಕ ಈ ನೋಟುಗಳು ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಶೇಖರಣೆಗೊಳ್ಳುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಕೇಂದ್ರ ಸರಕಾರವು ಈ ಬಗ್ಗೆ ಯಾವುದೇ ಅಧಿಕೃತ ದತ್ತಾಂಶವನ್ನು ಬಿಡುಗಡೆ ಮಾಡಿಲ್ಲವಾದರೂ, ಬುಧವಾರದಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪ್ರಕಟಿಸಿದ ಸಂಶೋ ಧನಾ ವರದಿಯ ಪ್ರಕಾರ 2018ರ ವಿತ್ತವರ್ಷದ ಆದಾಯದ ವೇಗವು ರಾಷ್ಟ್ರೀಯ ಸರಾಸರಿಗಿಂತ ತುಂಬಾ ಕಡಿಮೆಯಾಗಿದೆ ಎಂದು ಘೋಷ್ ತಿಳಿಸಿದ್ದಾರೆ. ಜನರು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿಡಲು ಕಾರಣವೇನಿ ರಬಹುದು?. 2 ಸಾವಿರ ರೂ. ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಾಗದಿ ರುವುದು ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ವಿಫಲವಾಗುತ್ತಿದೆಯೆಂಬ ಅತಿಯಾದ ಭೀತಿ ಕೂಡಾ ಜನರು 2 ಸಾವಿರ ರೂ. ಮುಖಬೆಲೆಯ ನೋಟುಗಳ ದಾಸ್ತಾನು ಮಾಡಲು ಕಾರಣವಾಗಿದೆ.ಇದೇ ವೇಳೆ 2 ಸಾವಿರ ರೂ. ನೋಟುಗಳನ್ನು ಕಾನೂನುಬಾಹಿರ ಉದ್ದೇಶಗಳಿಗೆ ಅಥವಾ ಕಪ್ಪುಹಣದ ವ್ಯವಹಾರಗಳಿಗೆ ಬಳಸುತ್ತಿ ರುವುದೇ ನೋಟುಗಳ ಅಭಾವಕ್ಕೆ ಕಾರಣವಾಗಿರುವ ಸಾಧ್ಯತೆ ಗಳ ಬಗ್ಗೆಯೂ ಸರಕಾರ ತನಿಖೆ ನಡೆಸಬೇಕಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆದಾಯದ ವೇಗದಲ್ಲಿ ಇಳಿಕೆ, ನಗದು ಪೂರೈಕೆಯ ಕೊರತೆ ಹಾಗೂ ದಿಢೀರ್ ಬೇಡಿಕೆ ಹಾಗೂ ಕಳಪೆರೀತಿಯಲ್ಲಿ ನಗದಿನ ನಿರ್ವಹಣೆಯು ದೇಶದ ವಿವಿಧೆಡೆ ನಗದಿನ ಅಭಾವವನ್ನು ಸೃಷ್ಟಿಸಿದೆ ಎನ್ನಬಹುದಾಗಿದೆ.

ಕೃಪೆ: ದಿ ವೈರ್

ಜನರು ಬ್ಯಾಂಕ್‌ಗಳಿಂದ ನಗದು ಹಿಂಪಡೆಯುತ್ತಿರುವುದು ಅಪಾಯಕಾರಿ ಸೂಚನೆಯೇ?

ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ನಗದಿಗಾಗಿ ಹಠಾತ್ತನೆ ಅಸಾಧಾರ ಣವಾದ ಬೇಡಿಕೆಯುಂಟಾಗಿದೆ ಹಾಗೂ ಹಣದ ಹಿಂಪಡೆತ (ವಿದ್‌ಡ್ರಾ)ಕೂಡಾ ಅಧಿಕವಾಗಿರುವುದೇ ನಗದು ಕೊರತೆಗೆ ಕಾರಣವೆಂಬುದು ಇನ್ನೊಂದು ತರ್ಕವಾಗಿದೆ. ಕೇಂದ್ರದ ಹಾಗೂ ಹಿರಿಯ ಸರಕಾರಿ ಅಧಿಕಾರಿಗಳು ಅಧಿಕೃತವಾಗಿ ಇದೇ ಕಾರಣವನ್ನು ನೀಡಿದ್ದಾರೆ.
ಸಾರ್ವಜನಿಕ ಮಾಹಿತಿಯ ಎರಡು ತುಣುಕುಗಳು ಈ ಸಿದ್ಧಾಂತವನ್ನು ಸಮರ್ಥಿಸುತ್ತವೆ. ‘ಬ್ಯುಸಿನೆಸ್ ಸ್ಟಾಂಡರ್ಡ್’ ಪತ್ರಿಕೆ ವರದಿ ಮಾಡಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ವಿಶ್ಲೇಷಣೆಯ ಪ್ರಕಾರ ಎಂಟು ರಾಜ್ಯಗಳಲ್ಲಿ ಹಣದ ಹಿಂಪಡೆತವು ಸಾಮಾನ್ಯಕ್ಕಿಂತ ಅಧಿಕವಾಗಿತ್ತು ಹಾಗೂ ಠೇವಣಿಯ ದರಕ್ಕೆ ಹೋಲಿಸಿದಲ್ಲಿ ಹೆಚ್ಚಿತ್ತು. ದುರದೃಷ್ಟವಶಾತ್ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಯಾವುದೇ ನಿರ್ದಿಷ್ಟ ಅಂಕಿಸಂಖ್ಯೆಗಳನ್ನು ನೀಡಿಲ್ಲ ಹಾಗೂ ಈ ಬಗ್ಗೆ ಆರ್‌ಬಿಐನ ಯಾವುದೇ ವಿಶ್ಲೇಷಣಾತ್ಮಕ ವರದಿಗಳು ಪ್ರಕಟವಾಗಿಲ್ಲ.
ಎರಡನೆಯದಾಗಿ, 2018ರ ಎಪ್ರಿಲ್ ತಿಂಗಳ ಮೊದಲ ಎರಡು ವಾರಗಳಲ್ಲಿ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹಾಗೂ ವಿತ್ತ ಸಚಿವಾಲಯದ ಅಧಿಕಾರಿ ಸುಭಾಶ್ಚಂದ್ರ ಗಾರ್ಗ್ ಅವರು 2018ರ ಎಪ್ರಿಲ್ ತಿಂಗಳ ಮೊದಲ ಎರಡು ವಾರಗಳಲ್ಲಿ 45 ಸಾವಿರ ಕೋಟಿ ರೂ.ಗಳನ್ನು ಭಾರತದ ಎಟಿಎಂಗಳಿಂದ ಹಿಂಪಡೆಯಲಾಗಿತ್ತು ಎಂಬ ವಿಷಯದ ಬಗ್ಗೆ ಗಮನಸೆಳೆದಿದ್ದಾರೆ. ಎಪ್ರಿಲ್ ತಿಂಗಳ ಮೊದಲ ಎರಡು ವಾರಗಳಲ್ಲಿ 45 ಸಾವಿರ ಕೋಟಿ ರೂ.ಗಳನ್ನು ಹಿಂದೆಗೆದುಕೊಳ್ಳಲಾಗಿದೆ. 2017-18ರ ವಿತ್ತ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧದಲ್ಲಿ, ಡೆಬಿಟ್ ಕಾರ್ಡ್‌ಗಳ ಮೂಲಕ ಎಟಿಎಂ ಗಳಿಂದ ಹಣ ಹಿಂಪಡೆಯುವಿಕೆಯಲ್ಲಿ ಶೇ.12.2ರಷ್ಟು ಏರಿಕೆಯಾಗಿದೆ.
ಮೊದಲಾರ್ಧಕ್ಕೆ ಹೋಲಿಸಿದರೆ ಯಾವುದೇ ವರ್ಷದ ದ್ವಿತೀಯಾರ್ಧದಲ್ಲಿ ನಗದು ಹಿಂಪಡೆತವು ಅಧಿಕವಾಗಿರುತ್ತದೆ. ಆದರೆ ಬೆಳವಣಿಗೆಯ ದರವು 2014-15 ಅಥವಾ 2015-16 ಹಣಕಾಸು ವರ್ಷಗಳಿಗಿಂತ 2017-18ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಅಧಿಕವಾಗಿ ಕಂಡುಬಂದಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿ ಸುಭಾಶ್ಚಂದ್ರ ಗಾರ್ಗ್ ಹೇಳಿದ್ದಾರೆ.
2018ರ ಡಿಸೆಂಬರ್-ಜನವರಿಯಲ್ಲಿ ನಗದಿನ ಪೂರೈಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದಾಗಿ ಆ್ಯಕ್ಸಿಸ್ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರು ತಿಳಿಸಿದ್ದಾರೆ.
‘‘ವಿಶೇಷವಾಗಿ 2018ರ ಡಿಸೆಂಬರ್-ಜನವರಿಯಲ್ಲಿ ನಗದಿನ ಬೇಡಿಕೆಯ ಪ್ರಮಾಣದ ತೀವ್ರ ಏರಿಕೆಯನ್ನು ವಿಶ್ಲೇಷಕರು ಕಂಡುಹಿಡಿದಿದ್ದಾರೆ. ಚುನಾವ ಣೆಗಳು, ಖಾರಿಫ್ ಬೆಳೆಯ ಮಾರಾಟವು ನಗದಿನ ಬೇಡಿಕೆಯಲ್ಲಿ ಏರಿಕೆಗೆ ಕಾರಣವಾಗಿರಬಹುದೆಂದು ಸಂಶಯಿಸಲಾಗಿದೆ. 2019ರ ಸಾಲಿನ ಮೊದಲ ಎರಡು ವಾರಗಳಲ್ಲಿಯೂ ಈ ಪ್ರವೃತ್ತಿ ಕಂಡುಬಂದಿದೆಯೆಂದು ಆ್ಯಕ್ಸಿಸ್ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾದ ಸೌಗತೋ ಭಟ್ಟಾಚಾರ್ಯ ಬರೆದಿದ್ದಾರೆ.
ಆಂಧ್ರಪ್ರದೇಶ, ಕರ್ನಾಟಕ ಅಥವಾ ಬಿಹಾರದಂತಹ ನಿರ್ದಿಷ್ಟ ರಾಜ್ಯಗಳಲ್ಲಿ ನಗದಿನ ಅಧಿಕ ಹಿಂಪಡೆಯುವಿಕೆಯು, ನಗದು ಅಭಾವಕ್ಕೆ ಕಾರಣವೆಂದು ನಿರ್ಣಯಿಸಬಹು ದಾಗಿದೆ. ಇದರ ಜೊತೆಗೆ ವ್ಯವಸ್ಥಾಪನಾ ಹಾಗೂ ನಗದು ನಿರ್ವಹಣೆ ಯಲ್ಲಿ ಅದಕ್ಷತೆ ಇವು ಕೂಡಾ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆಯಿದೆ.
ಕೇಂದ್ರ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಕರೆನ್ಸಿ ಚೆಸ್ಟ್‌ನಲ್ಲಿ ಸ್ಥಳಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ನೋಟು ಮುದ್ರಣವನ್ನು ಕಡಿತಗೊಳಿಸುವ ನಿರ್ಧಾರವನ್ನು 2017ರ ನವೆಂಬರ್‌ನಲ್ಲಿ ಆರ್‌ಬಿಐ ಕೈಗೊಂಡಿತ್ತು. ಆದರೆ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ ಕರೆನ್ಸಿ ಚೆಸ್ಟ್‌ಗಳಲ್ಲಿ ಸ್ಥಳಾವಕಾಶ ದೊರೆಯಿತು.
ಮಹಾರಾಷ್ಟ್ರದ ನಾಶಿಕ್‌ನಲ್ಲಿರುವ ನೋಟುಗಳ ಮುದ್ರಣಾಲಯದಲ್ಲಿ ಮುದ್ರಣ ಶಾಯಿಯ ಕೊರತೆ ಕೂಡಾ ನೋಟುಗಳ ಅಭಾವಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ