ಬಿಸ್ಕೆಟ್ ತರಲು ಹೋದ 6 ವರ್ಷದ ಬಾಲಕಿಯ ಅತ್ಯಾಚಾರ

Update: 2018-04-23 15:56 GMT

ಭುವನೇಶ್ವರ ಎ.23: ಬಿಸ್ಕೆಟ್ ತರಲು ಹೋದ 6 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರಗೈದು ಕತ್ತು ಕತ್ತರಿಸಿ ಶಾಲೆಯ ಕ್ಯಾಂಪಸ್‌ನಲ್ಲಿ ಎಸೆದು ಹೋದ ಘಟನೆ ಒರಿಸ್ಸಾದ ಕಟಕ್ ಜಿಲ್ಲೆಯ ಜಗನ್ನಾಥಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿ 25 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ವಿದ್ಯುತ್ ಕಡಿತಗೊಂಡ ಸಂದರ್ಭ ಬಾಲಕಿ ಬಿಸ್ಕೆಟ್ ತರಲು ಸಮೀಪದ ಅಂಗಡಿಗೆ ಹೋಗಿದ್ದಳು. ಆದರೆ, ತುಂಬಾ ಹೊತ್ತಾದರೂ ಆಕೆ ಹಿಂದಿರುಗಿ ಬರಲಿಲ್ಲ. ಆತಂಕಗೊಂಡ ಕುಟುಂಬದ ಸದಸ್ಯರು ಗ್ರಾಮದ ಜನರೊಂದಿಗೆ ಹುಡುಕಾಟ ನಡೆಸಿದರು. ತೀವ್ರ ಹುಡುಕಾಟದ ಬಳಿಕ ಬಾಲಕಿಯನ್ನು ಶಾಲೆಯ ಕ್ಯಾಂಪಸ್‌ನ ಒಳಗಡೆ ಪತ್ತೆಯಾಗಿದ್ದಳು, ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಕಟಕ್ ಎಸ್‌ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News