ಪ್ಯಾರಿಸ್ ದಾಳಿಯ ಆರೋಪಿಗೆ 28 ವರ್ಷ ಜೈಲು

Update: 2018-04-23 17:52 GMT

ಬ್ರಸೆಲ್ಸ್ (ಬೆಲ್ಜಿಯಂ), ಎ. 23: ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಆರೋಪಿ ಸಲಾಹ್ ಅಬ್ದುಸ್ಸಲಾಮ್‌ನಿಗೆ ತನ್ನನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವುದಕ್ಕಾಗಿ ಬೆಲ್ಜಿಯಂನ ನ್ಯಾಯಾಲಯವೊಂದು ಸೋಮವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಭಯೋತ್ಪಾದನೆಯಲ್ಲಿ ಸಲಾಹ್ ಅಬ್ದುಸ್ಸಲಾಮ್ ಶಾಮೀಲಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

ತೀರ್ಪು ಘೋಷಣೆಯಾದಾಗ 28 ವರ್ಷದ ಅಬ್ದುಸ್ಸಲಾಮ್ ನ್ಯಾಯಾಲಯದಲ್ಲಿರಲಿಲ್ಲ.

2016 ಮಾರ್ಚ್ 15ರಂದು ಬ್ರಸೆಲ್ಸ್‌ನ ಅರಣ್ಯ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸುವಾಗ, ಅವರ ಮೇಲೆ ಆತ ಗುಂಡು ಹಾರಿಸಿದ್ದನು. ಈ ದಾಳಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದರು.

ಆತನು ಈಗ ಫ್ರಾನ್ಸ್‌ನ ಜೈಲೊಂದರಲ್ಲಿ ಇದ್ದು, ಪ್ಯಾರಿಸ್ ದಾಳಿಯ ವಿಚಾರಣೆ ಈಗಲೂ ನಡೆಯುತ್ತಿದೆ. ಆ ದಾಳಿಯಲ್ಲಿ 130 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News