ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಿಂದ ಭಾರತ ಹಿಂದುಳಿದಿದೆ: ನೀತಿ ಆಯೋಗದ ಸಿಇಒ

Update: 2018-04-24 07:16 GMT

ಹೊಸದಿಲ್ಲಿ, ಎ.24: ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದ ರಾಜ್ಯಗಳು ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದರೆ, ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಮುಖ್ಯವಾಗಿ ಸಾಮಾಜಿಕ ಸೂಚಕಗಳ ವಿಚಾರದಲ್ಲಿ ದೇಶವನ್ನು ಹಿಂದುಳಿಯುವಂತೆ ಮಾಡಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ  ಪ್ರಥಮ ಖಾನ್ ಅಬ್ದುಲ್ ಗಫಾರ್ ಖಾನ್ ಸ್ಮಾರಕಾರ್ಥ 'ಭಾರತದಲ್ಲಿ ಬದಲಾವಣೆ ತರಲು ಇರುವ ಸವಾಲುಗಳ' ವಿಚಾರದ ಮೇಲೆ ಭಾಷಣ ನೀಡಿದ ಅವರು, "ದೇಶದಲ್ಲಿ  ಸುಗಮ ಉದ್ಯಮ ನಡೆಸುವ ವಿಚಾರದಲ್ಲಿ ಸುಧಾರಣೆ ಉಂಟಾಗಿದ್ದರೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ. ಈ ವಿಚಾರದಲ್ಲಿ 188 ರಾಷ್ಟ್ರಗಳ ಪೈಕಿ ನಾವು 131ನೇ ಸ್ಥಾನದಲ್ಲಿದ್ದೇವೆ'' ಎಂದು ಅವರು ತಿಳಿಸಿದರು.

ಸುಸ್ಥಿರ ಅಭಿವೃದ್ಧಿ ಬಗ್ಗೆ ಒತ್ತಿ ಹೇಳಿದ ಅವರು, "ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲೂ ಭಾರತ ಹಿಂದುಳಿದಿದೆ. ಶಿಶು ಮರಣ ಪ್ರಮಾಣ ಹೆಚ್ಚಾಗಿದೆ.  ಈ ವಿಚಾರಗಳಲ್ಲಿ ಅಭಿವೃದ್ಧಿ ಸಾಧಿಸದೇ ಇದ್ದರೆ ಸುಸ್ಥಿರ ಅಭಿವೃದ್ಧಿ ಅಸಾಧ್ಯ'' ಎಂದು ಅವರು ಹೇಳಿದರು. ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲುದಾರಿಕೆಯ ಅಗತ್ಯವನ್ನೂ ಅವರು ಒತ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News