ಅಮೆರಿಕ: ಮುಸ್ಲಿಮರ ವಿರುದ್ಧದ ಆಕ್ರಮಣ ಪ್ರಕರಣಗಳಲ್ಲಿ ಹೆಚ್ಚಳ

Update: 2018-04-24 17:39 GMT
ಸಾಂದರ್ಭಿಕ ಚಿತ್ರ

ಬೋಸ್ಟನ್, ಎ. 24: ಅಮೆರಿಕದ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ದ್ವೇಷಾಪರಾಧಗಳು 2017ರಲ್ಲಿ 15 ಶೇಕಡದಷ್ಟು ಹೆಚ್ಚಿವೆ ಎಂದು ‘ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್’ ಸೋಮವಾರ ಬಿಡುಗಡೆ ಮಾಡಿದ ಅಧ್ಯಯನವೊಂದು ಹೇಳಿದೆ.

ಕಳೆದ ವರ್ಷ ಅಮೆರಿಕದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ 300 ದ್ವೇಷಾಪರಾಧಗಳು ನಡೆದಿವೆ ಎಂದು ಅದು ತಿಳಿಸಿದೆ.

ಜೂನ್‌ನಲ್ಲಿ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಬೋರೋದಲ್ಲಿ ಕೆಲವು ದುಷ್ಕರ್ಮಿಗಳು ಮುಸ್ಲಿಮ್ ವ್ಯಕ್ತಿಯೋರ್ವರನ್ನು ‘ಭಯೋತ್ಪಾದಕ’ ಎಂದು ಕರೆದು ಹಲ್ಲೆ ಮಾಡಿರುವುದು ಹಾಗೂ ನವೆಂಬರ್‌ನಲ್ಲಿ ಕ್ಯಾನ್ಸಸ್‌ನಲ್ಲಿರುವ ಮುಸ್ಲಿಮ್ ಕುಟುಂಬವೊಂದಕ್ಕೆ ಸೇರಿದ ರೆಸ್ಟೊರೆಂಟನ್ನು ಸುಟ್ಟು ಹಾಕಿರುವುದು ಈ ದ್ವೇಷಾಪರಾಧಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News