ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ

Update: 2018-04-24 19:01 GMT

ಹೊಸದಿಲ್ಲಿ, ಎ.24: ಮುಂದಿನ ವರ್ಷ ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಶಿಪ್ ಆತಿಥ್ಯವಹಿಸಿಕೊಳ್ಳಲು ಭಾರತ ನಿರ್ಧರಿಸಿದೆ. ಇದು ಭಾರತದ ವೇಟ್‌ಲಿಫ್ಟಿಂಗ್‌ನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ. ‘‘ಉಝ್ಬೇಕಿಸ್ತಾನದಲ್ಲಿ ಎ.22 ರಂದು ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ 2019ರ ಆವೃತ್ತಿಯ ಏಷ್ಯನ್ ಸೀನಿಯರ್(ಪುರುಷರು, ಮಹಿಳೆಯರು) ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆತಿಥ್ಯದ ಹಕ್ಕನ್ನು ಭಾರತಕ್ಕೆ ವಹಿಸಿಕೊಡಲು ನಿರ್ಧರಿಸಲಾಗಿದೆ’’ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ಹೇಳಿದ್ದಾರೆ.
 ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ದಿನಾಂಕ ಹಾಗೂ ಆತಿಥೇಯ ನಗರವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಈ ಚಾಂಪಿಯನ್‌ಶಿಪ್ 2020ರ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಾಗಿದೆ. ಇದರಲ್ಲಿ 300ಕ್ಕೂ ಅಧಿಕ ವೇಟ್‌ಲಿಫ್ಟರ್‌ಗಳು ಭಾಗವಹಿಸಿ ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ. ವೇಟ್‌ಲಿಫ್ಟಿಂಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಏಷ್ಯನ್ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿದೆ.
ಇದೀಗ ಏಷ್ಯನ್ ವೇಟ್‌ಲಿಫ್ಟರ್‌ಗಳು ಹೆಚ್ಚಿನೆಲ್ಲಾ ತೂಕ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುವುದರೊಂದಿಗೆ ವಿಶ್ವದಲ್ಲಿ ಮಿಂಚುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News