ಪಾಕ್ ರಂಗಭೂಮಿಯ ಸಾಧಕಿ ಮದೀಹಾ ಇನ್ನಿಲ್ಲ

Update: 2018-04-25 17:19 GMT

ಇಸ್ಲಾಮಾಬಾದ್, ಎ. 25: ಪಾಕಿಸ್ತಾನಿ ರಂಗಭೂಮಿಯ ಸಾಧಕಿ ಹಾಗೂ ಭಾರತ-ಪಾಕಿಸ್ತಾನ ಶಾಂತಿಗಾಗಿ ಅವಿರತ ಶ್ರಮಿಸಿದ ಮದೀಹಾ ಗೌಹರ್ ಲಾಹೋರ್‌ನಲ್ಲಿ ಬುಧವಾರ ನಿಧನರಾಗಿದ್ದಾರೆ.

ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಮೂರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು.

ನಟಿ, ನಿರ್ದೇಶಕಿ ಹಾಗೂ ಹೋರಾಟಗಾರ್ತಿಯಾಗಿದ್ದ ಅವರು, ಸಾಮಾಜಿಕ ಬದಲಾವಣೆಗಾಗಿ ರಂಗಭೂಮಿಯನ್ನು ಬಳಸುವ ಬಗ್ಗೆ ಬದ್ಧತೆ ಹೊಂದಿದ್ದರು. ಅವರು ಪಾಕಿಸ್ತಾನದ ಮಹಿಳಾ ಹಕ್ಕುಗಳ ಪ್ರಮುಖ ಹೋರಾಟಗಾರ್ತಿಯೂ ಆಗಿದ್ದರು.

ಅವರು 1984ರಲ್ಲಿ ತನ್ನ ಪತಿ ಹಾಗೂ ನಾಟಕಕಾರ ಶಾಹಿದ್ ನದೀಮ್ ಜೊತೆಗೆ ಅಜೋಕ ತಿಯೇಟರ್‌ನ್ನು ಸ್ಥಾಪಿಸಿದ್ದರು.

ಗೌಹರ್ ಭಾರತೀಯ ಕಲಾವಿದರೊಂದಿಗೆ ಸಹಯೋಗ ಹೊಂದಿದ್ದರು ಹಾಗೂ ಭಾರತೀಯ ನಗರಗಳಲ್ಲಿ ನಡೆದ ರಂಗಭೂಮಿ ಉತ್ಸವಗಳಲ್ಲಿ ಹಲವಾರು ನಾಟಕಗಳನ್ನು ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News