×
Ad

ಭಾರತೀಯ ಐಟಿ ಕಂಪೆನಿಗಳ ಎಚ್-1ಬಿ ವೀಸಾ ಪ್ರಮಾಣದಲ್ಲಿ 43 ಶೇ. ಇಳಿಕೆ

Update: 2018-04-25 22:54 IST

ವಾಶಿಂಗ್ಟನ್, ಎ. 25: ಭಾರತದ ಏಳು ಉನ್ನತ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಎಚ್-1ಬಿ ವೀಸಾ ಅರ್ಜಿಗಳ ಸ್ವೀಕಾರ ಪ್ರಮಾಣವು 2015 ಮತ್ತು 2017 ನಡುವಿನ ಅವಧಿಯಲ್ಲಿ 43 ಶೇಕಡದಷ್ಟು ಕುಸಿದಿದೆ ಎಂದು ಅಮೆರಿಕದ ‘ನ್ಯಾಶನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ’ಯು ವರದಿಯೊಂದರಲ್ಲಿ ಹೇಳಿದೆ.

2017ರ ಆರ್ಥಿಕ ವರ್ಷದಲ್ಲಿ ಭಾರತೀಯ ಕಂಪೆನಿಗಳಿಗೆ 8,468 ನೂತನ ಎಚ್-1ಬಿ ವೀಸಾಗಳು ದೊರೆತಿದ್ದು, ಇದು ಅಮೆರಿಕದ ಒಟ್ಟು ಕಾರ್ಮಿಕ ಬಲ 16 ಕೋಟಿಯ 0.006 ಶೇಕಡ ಆಗಿದೆ ಎಂದು ವರದಿ ತಿಳಿಸಿದೆ.

 2015ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು 43 ಶೇಕಡದಷ್ಟು ಕುಸಿತವಾಗಿದೆ. 2015ರಲ್ಲಿ ಭಾರತೀಯ ಐಟಿ ಕಂಪೆನಿಗಳಿಗೆ 14,792 ಎಚ್-1ಬಿ ವೀಸಾಗಳು ದೊರೆತಿದ್ದವು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2015ರಲ್ಲಿ 4,674 ಎಚ್-1ಬಿ ವೀಸಾಗಳನ್ನು ಪಡೆದಿದ್ದರೆ, 2017ರಲ್ಲಿ ಕೇವಲ 2,312 ವೀಸಾಗಳನ್ನು ಪಡೆದಿದೆ. ಇಲ್ಲಿ 51 ಶೇಕಡ ಇಳಿಕೆಯಾಗಿದೆ.

ಇದೇ ಅವಧಿಯಲ್ಲಿ ಇನ್ಫೋಸಿಸ್ ಪಡೆದ ವೀಸಾಗಳ ಸಂಖ್ಯೆಯಲ್ಲಿ 57 ಶೇ. ಕುಸಿತವಾಗಿದೆ. 2015ರಲ್ಲಿ ಅದು 2,830 ವೀಸಾಗಳನ್ನು ಪಡೆದಿದ್ದರೆ, 2017ರಲ್ಲಿ ಈ ಸಂಖ್ಯೆ 1,218 ಆಗಿದೆ.

ವಿಪ್ರೊ 2015ರಲ್ಲಿ 3,079 ಎಚ್-1ಬಿ ವೀಸಾಗಳನ್ನು ಪಡೆದಿದ್ದರೆ, 2017ರಲ್ಲಿ ಈ ಸಂಖ್ಯೆ 1,210ಕ್ಕೆ ಕುಸಿದಿದೆ.

ಭಾರತದ 7 ಐಟಿ ಕಂಪೆನಿಗಳ ಪೈಕಿ ಟೆಕ್ ಮಹೀಂದ್ರ ಪಡೆದಿರುವ ಎಚ್-1ಬಿ ವೀಸಾಗಳ ಪ್ರಮಾಣ ಮಾತ್ರ ಈ ಅವಧಿಯಲ್ಲಿ ಹೆಚ್ಚಿದೆ. ಟೆಕ್ ಮಹೀಂದ್ರಕ್ಕೆ 2015ರಲ್ಲಿ 1,576 ಎಚ್-1ಬಿ ವೀಸಾಗಳನ್ನು ನೀಡಿದ್ದರೆ, 2017ರಲ್ಲಿ ಈ ಸಂಖ್ಯೆ 2233ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News