ಮಾತುಕತೆಗೆ ಸಿರಿಯವನ್ನು ಕರೆತನ್ನಿ: ರಶ್ಯ, ಇರಾನ್‌ಗೆ ಐರೋಪ್ಯ ಒಕ್ಕೂಟ ಒತ್ತಾಯ

Update: 2018-04-25 18:05 GMT

ಬ್ರಸೆಲ್ಸ್ (ಬೆಲ್ಜಿಯಮ್), ಎ. 25: ಸಿರಿಯದ ಭೀಕರ ಆಂತರಿಕ ಯುದ್ಧವನ್ನು ಕೊನೆಗೊಳಿಸುವುದಕ್ಕಾಗಿ ಮಾತುಕತೆಗಳಲ್ಲಿ ತೊಡಗುವಂತೆ ಸಿರಿಯದ ಮೇಲೆ ಒತ್ತಡ ಹೇರುವಂತೆ ಐರೋಪ್ಯ ಒಕ್ಕೂಟ ಬುಧವಾರ ರಶ್ಯ ಮತ್ತು ಇರಾನನ್ನು ಒತ್ತಾಯಿಸಿದೆ.

ಸಿರಿಯದ ಆಂತರಿಕ ಯುದ್ಧ ಈಗ 8ನೇ ವರ್ಷದಲ್ಲಿದೆ.

ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನೆರವು ನೀಡುವ ಬದ್ಧತೆಯನ್ನು ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ರ ಮಿತ್ರರಾಗಿರುವ ಮಾಸ್ಕೊ ಮತ್ತು ಟೆಹರಾನ್‌ಗಳು ಹೊಂದಿವೆ ಎಂದು ಐರೋಪ್ಯ ಒಕ್ಕೂಟ ರಾಜತಾಂತ್ರಿಕ ಮುಖ್ಯಸ್ಥೆ ಫೆಡರಿಕಾ ಮೋಗರಿನಿ ಹೇಳಿದ್ದಾರೆ.

ಬಂಡುಕೋರರ ನಿಯಂತ್ರಣದಲ್ಲಿರುವ ಇದ್ಲಿಬ್ ಪ್ರಾಂತದಲ್ಲಿ ಭೀಕರ ಮಾನವೀಯ ಬಿಕ್ಕಟ್ಟು ಅನಾವರಣಗೊಳ್ಳಲಿದೆ ಎಂಬುದಾಗಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಎಚ್ಚರಿಸಿದ ಬಳಿಕ, 80ಕ್ಕೂ ಹೆಚ್ಚಿನ ದೇಶಗಳು, ನೆರವು ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಘಟಕಗಳು ಸಿರಿಯದ ಭವಿಷ್ಯದ ಬಗ್ಗೆ ಬ್ರಸೆಲ್ಸ್‌ನಲ್ಲಿ ಮಂಗಳವಾರ ಸಭೆ ಆರಂಭಿಸಿವೆ.

ಎರಡನೆ ದಿನವಾದ ಬುಧವಾರವೂ ಸಭೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News