1.34 ಲಕ್ಷ ಆಧಾರ್ ಕಾರ್ಡ್‌ದಾರರ ಮಾಹಿತಿ ಸೋರಿಕೆ

Update: 2018-04-26 16:28 GMT

ಹೊಸದಿಲ್ಲಿ, ಎ. 26: ಆಧಾರ್ ದತ್ತಾಂಶ ಸೋರಿಕೆ ಮಾಡುವುದಾಗಲಿ, ದುರ್ಬಳಕೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಭಾರತೀಯ ಅನನ್ಯ ಗುರುತು ಪ್ರಾಧಿಕಾರ (ಯುಐಡಿಎಐ) ಹೇಳಿದೆ. ಆದರೆ, ಇದಕ್ಕೆ ವಿರೋಧಾಭಾಸ ಎಂಬಂತೆ 1.34 ಲಕ್ಷ ಆಧಾರ್ ಕಾರ್ಡ್‌ದಾರರ ಜಾತಿ, ಧರ್ಮದಂತಹ ವಿವರಗಳನ್ನು ಒಳಗೊಂಡ ಅತಿಸೂಕ್ಷ್ಮ ದತ್ತಾಂಶಗಳು ಆಂಧ್ರಪ್ರದೇಶದ ಹೌಸಿಂಗ್ ಕಾರ್ಪೊರೇಶನ್ ವೆಬ್‌ಸೈಟ್‌ನಿಂದ ಸೋರಿಕೆ ಆಗಿರುವುದು ಬೆಳಕಿಗೆ ಬಂದಿದೆ.

ವೆಬ್‌ಸೈಟ್‌ನಿಂದ ಸೋರಿಕೆಯಾದ ದತ್ತಾಂಶ ‘ಬೆನಿಫೀಷಿಯರಿ ಡಿಟೈಲ್ಸ್ ಬಿಲಾಂಗಿಂಗ್ಸ್ ಟು ಎಂಟ್ರಿ ರಿಪೋರ್ಟ್ ಪಾರ್ ಸ್ಕೀಮ್ ಹುಡುಹುಡ್’ ಶೀರ್ಷಿಕೆ ಹೊಂದಿರುವ ಪಟ್ಟಿಯ ಒಂದು ಭಾಗ. ವೆಬ್‌ಸೈಟ್‌ನಲ್ಲಿದ್ದ ವ್ಯಕ್ತಿಯ ಆಧಾರ್ ಸಂಖ್ಯೆ, ಬ್ಯಾಂಕ್ ಶಾಖೆ, ಐಎಫ್‌ಎಸ್‌ಸಿ ಕೋಡ್, ಖಾತೆ ಸಂಖ್ಯೆ, ತಂದೆಯ ಹೆಸರು, ವಿಳಾಸ, ಪಂಚಾಯತ್, ಮೊಬೈಲ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಉದ್ಯೋಗ, ಜಾತಿ ಹಾಗೂ ಧರ್ಮ ಮೊದಲಾದ ವಿವರಗಳು ಸೋರಿಕೆಯಾಗಿವೆ. ಈ ಸೋರಿಕೆಯನ್ನು ಸೈಬರ್ ಭದ್ರತೆಯ ಸಂಶೋಧಕ ಶ್ರೀನಿವಾಸ ಕೊಡಾಲಿ ವರದಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News