ಐಪಿಎಲ್: ಅಂಕಿತ್ ದಾಳಿಗೆ ಹೈದರಾಬಾದ್ ತತ್ತರ

Update: 2018-04-26 16:49 GMT

ಹೈದರಾಬಾದ್, ಎ.26: ಅಂಕಿತ್ ಸಿಂಗ್ ರಾಜ್‌ಪೂತ್(5-14) ಅತ್ಯುತ್ತಮ ಬೌಲಿಂಗ್ ದಾಳಿಗೆ ಸಿಲುಕಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ನ 25ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 20 ಓವರ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನಿಂಗ್ಸ್‌ನ ಮೊದಲ ಓವರ್‌ನ 4ನೇ ಎಸೆತದಲ್ಲಿ ನಾಯಕ ಕೇನ್ ವಿಲಿಯಮ್ಸನ್(0) ವಿಕೆಟ್ ಕಳೆದುಕೊಂಡ ಹೈದರಾಬಾದ್ ಕಳಪೆ ಆರಂಭ ಪಡೆಯಿತು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್(11), ವೃದ್ಧಿಮಾನ್ ಸಹಾ(6) ಬೇಗನೇ ಔಟಾದರು. ಮನೀಶ್ ಪಾಂಡೆ54 ರನ್(51 ಎಸೆತ,3ಬೌಂಡರಿ,1 ಸಿಕ್ಸರ್) ಹಾಗೂ ಶಾಕಿಬ್ ಅಲ್ ಹಸನ್ 28 ರನ್(29ಎಸೆತ)4ನೇ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಪಾಂಡೆ ಹಾಗೂ ಯೂಸುಫ್ ಪಠಾಣ್(ಔಟಾಗದೆ 21)5ನೇ ವಿಕೆಟ್‌ಗೆ 49 ರನ್ ಸೇರಿಸಿದರೂ ತಂಡವನ್ನು ದೊಡ್ಡ ಮೊತ್ತದತ್ತ ಮುನ್ನಡೆಸಲು ವಿಫಲರಾದರು.

ರಾಜ್‌ಪೂತ್ 4 ಓವರ್‌ಗಳಲ್ಲಿ 14 ರನ್ ನೀಡಿ 5 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News