ಮಕ್ಕಳು ವಾಹನ ಚಲಾಯಿಸಿದ್ದಕ್ಕಾಗಿ ತಂದೆ ತಾಯಿಗೆ ಜೈಲು

Update: 2018-04-27 10:13 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಎ.27: ಮಕ್ಕಳು ವಾಹನ ಚಲಾಯಿಸಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಕಠಿಣ ಕ್ರಮಕೈಗೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ 26 ಮಕ್ಕಳ ತಂದೆತಾಯಿಯರನ್ನು ಹೈದರಾಬಾದ್ ಪೊಲೀಸರು ಜೈಲಿಗಟ್ಟಿದ್ದಾರೆ.

ಮಾರ್ಚ್ ತಿಂಗಳಲ್ಲಿ 20 ಮತ್ತು ಎಪ್ರಿಲ್‍ನಲ್ಲಿ 6 ಪೋಷಕರಿಗೆ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಡ್ಡಾಯ ಕೌನ್ಸಿಲಿಂಗ್‍ನ್ನು ಕೂಡಾ ಪೊಲೀಸರು ನಡೆಸುತ್ತಿದ್ದಾರೆ. ಆದರೆ ವಾಹನ ಚಲಾಯಿಸುವ ಅಪ್ರಾಪ್ತರ ಸಂಖ್ಯೆಯಲ್ಲಿ ಕಡಿಮೆಯಾಗಿರಲಿಲ್ಲ. ಆದ್ದರಿಂದ ಪೊಲೀಸರು ತಪ್ಪಿತಸ್ಥ ಮಕ್ಕಳ ತಂದೆತಾಯಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದರು.

ನಿರ್ಲಕ್ಷ್ಯತೆಯಿಂದ ವಾಹನ  ಚಲಾಯಿಸುವವರಿಗೆ ಮಾತ್ರವಲ್ಲ, ಇತರರಿಗೂ ಅಪಾಯವಾಗುತ್ತದೆ ಎನ್ನುವ ಜಾಗೃತಿಯನ್ನು ಇಂತಹ ಕ್ರಮಗಳ ಮೂಲಕ ಮೂಡಿಸಲಾಗುತ್ತಿದೆ ಎಂದು ಹೈದರಾಬಾದ್ ಪೊಲೀಸ್ ಸುಪರಿಟೆಂಡೆಂಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News