ಗ್ರಾಮಗಳನ್ನು ಬಯಲುಶೌಚಮುಕ್ತವಾಗಿಸಲು 'ಅಕ್ಕಿ'ಯನ್ನು ಅಸ್ತ್ರವಾಗಿಸಿದ ಕಿರಣ್ ಬೇಡಿ

Update: 2018-04-28 14:15 GMT

ಪುದುಚೇರಿ,ಎ.28: ಗ್ರಾಮಗಳು ಬಯಲು ಶೌಚಮುಕ್ತವಾಗಿವೆ ಮತ್ತು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳಿಂದ ಮುಕ್ತವಾಗಿವೆ ಎಂದು ಪ್ರಮಾಣೀಕೃತವಾಗಿದ್ದರೆ ಮಾತ್ರ ಅಂತಹ ಗ್ರಾಮಗಳಿಗೆ ಉಚಿತ ಅಕ್ಕಿಯನ್ನು ವಿತರಿಸುವಂತೆ ಪುದುಚೇರಿಯ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರು ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟ ನಿರ್ದೇಶ ನೀಡಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಗಳ ಪರಿವರ್ತನೆಗಾಗಿ ಪ್ರಯತ್ನಗಳ ಹೊರತಾಗಿಯೂ ಗ್ರಾಮೀಣ ನೈರ್ಮಲ್ಯ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾಗರಿಕ ಪೂರೈಕೆ ಇಲಾಖೆಯ ನಿರ್ದೇಶಕರಿಗೂ ನಿರ್ದೇಶಗಳನ್ನು ನೀಡಿರುವ ಬೇಡಿ,ಗ್ರಾಮಗಳನ್ನು ಸ್ವಚ್ಛವಾಗಿಸಲು ಮೇ.30ರವರೆಗೆ ನಾಲ್ಕು ವಾರಗಳ ಗಡುವು ನೀಡಿದ್ದಾರೆ.

ಬೇಡಿ ಅವರು ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಹಲವಾರು ತಡೆಗಳನ್ನು ಒಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಕಳೆದ ವಾರ ಆರೋಪಿಸಿದ್ದರು. ಆದರೆ ಆರೋಪವನ್ನು ತಿರಸ್ಕರಿಸಿದ್ದ ಬೇಡಿ,ತಾನು ಜನರಿಗಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ತಿರುಗೇಟು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News