ಉತ್ತರ ಕೊರಿಯ ಹಡಗುಗಳ ಮೇಲೆ ಆಸ್ಟ್ರೇಲಿಯ ನಿಗಾ

Update: 2018-04-28 17:32 GMT

ಸಿಡ್ನಿ, ಎ. 28: ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ಉಲ್ಲಂಘಿಸಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದೆಯೆನ್ನಲಾದ ಉತ್ತರ ಕೊರಿಯದ ಹಡಗುಗಳ ಮೇಲೆ ನಿಗಾ ಇಡಲು ಆಸ್ಟ್ರೇಲಿಯ ಸೇನಾ ಗಸ್ತು ವಿಮಾನವೊಂದನ್ನು ಕಳುಹಿಸಿಕೊಡಲಿದೆ ಎಂದು ಆಸ್ಟ್ರೇಲಿಯದ ರಕ್ಷಣಾ ಸಚಿವೆ ಮ್ಯಾರಿಸ್ ಪಾಯ್ನಾ ಶನಿವಾರ ಹೇಳಿದ್ದಾರೆ.

ಅದೇ ವೇಳೆ, ಉತ್ತರ ಕೊರಿಯದ ಮೇಲಿನ ಆರ್ಥಿಕ ಹಾಗೂ ರಾಜತಾಂತ್ರಿಕ ಒತ್ತಡವನ್ನು ಮುಂದುವರಿಸುವುದಾಗಿಯೂ ಅಮೆರಿಕದ ಮಿತ್ರ ದೇಶ ಆಸ್ಟ್ರೇಲಿಯ ಹೇಳಿದೆ.

‘‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ನಮ್ಮ ಪ್ರದೇಶದಲ್ಲಿ ಜಾರಿಗೊಳ್ಳುವಂತೆ ನೋಡಿಕೊಳ್ಳುವುದಕ್ಕಾಗಿ ಆಸ್ಟ್ರೇಲಿಯವು ಪಿ-8ಎ ಪಸೈಡಾನ್ ಸಾಗರ ಗಸ್ತು ವಿಮಾನವೊಂದನ್ನು ಜಪಾನ್‌ಗೆ ಕಳುಹಿಸಿಕೊಡಲಿದೆ’’ ಎಂದು ಮಾಧ್ಯಮ ಪ್ರಕಟನೆಯೊಂದರಲ್ಲಿ ಪಾಯ್ನಾ ತಿಳಿಸಿದರು.

‘‘ಉತ್ತರ ಕೊರಿಯದ ಅಕ್ರಮ ವ್ಯಾಪಾರ ಮತ್ತು ಅದಕ್ಕೆ ಸಂಬಂಧಿಸಿದ ಜಾಲಗಳನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ಅಭಿಯಾನಕ್ಕೆ ವಿಮಾನ ನಿಯೋಜನೆಯಿಂದ ಪ್ರಯೋಜನವಾಗುವುದು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News